Featured

ಕಟಪಾಡಿ : ಎರಡು ವರ್ಷದಿಂದ ಸಾರ್ವಜನಿಕ ಶೌಚಾಲಯ ಬಂದ್ , ಖಾಲಿ ಬಾಟಲಿಗಳಲ್ಲಿ ಮೂತ್ರ ವಿಸರ್ಜನೆ – Vishwanews24

ಕಟಪಾಡಿ : ಎರಡು ವರ್ಷದಿಂದ ಸಾರ್ವಜನಿಕ ಶೌಚಾಲಯ ಬಂದ್ ..

ಖಾಲಿ ಬಾಟಲಿಗಳಲ್ಲಿ ಮೂತ್ರ ವಿಸರ್ಜನೆ ..

ಗ್ರಾಮಸ್ಥರು ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣ..

ಶೌಚಾಲಯದ ಬಗ್ಗೆ ಪಂಚಾಯತ್, ಸ್ಥಳೀಯ ಶಾಸಕರು ಗಮನವಹಿಸದೆ ಇರುವುದು ವಿಪರ್ಯಾಸ..

ಉಡುಪಿ: ಜಿಲ್ಲೆಯ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ಎರಡು ವರ್ಷದಿಂದ ಕಾರ್ಯಚರಿಸದೆ ಅಲ್ಲಿಯ ಜನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಉಡುಪಿ ಜಿಲ್ಲೆಯ ಕಟಪಾಡಿ ಪೇಟೆಯ ಹೃದಯ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯ ಸುಮಾರು ಎರಡು ವರ್ಷದಿಂದ ಬಂದ್ ಆಗಿದ್ದು, ಇಂದಿಗೂ ಗ್ರಾಮಸ್ಥರು ಪ್ರಯಾಣಿಕರು ರಿಕ್ಷಾ ಚಾಲಕರು ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕಟಪಾಡಿ ಜಂಕ್ಷನ್ ಗೆ ನಾಲ್ಕು ಊರಿಂದ ಪ್ರಯಾಣಿಕರು ಬರುತ್ತಾರೆ. ಶಿರ್ವ, ಕಾಪು, ಪಡುಕೆರೆ ಉದ್ಯಾವರ ಭಾಗದ ಜನರು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಟಪಾಡಿ ಪೇಟೆಯಲ್ಲಿರುವ ರಿಕ್ಷಾ ಚಾಲಕರು, ಟೆಂಪೋ ಚಾಲಕರು, ಅಂಗಡಿ ಕೆಲಸದವರು,ಹೊರ ರಾಜ್ಯದ ಕೂಲಿ ಕಾರ್ಮಿಕರು ದಿನನಿತ್ಯ ಬಹಿರ್ದೆಸೆಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಮೀನು ಮಾರುಕಟ್ಟೆಯ ಶೌಚಾಲಯ, ಹೋಟೆಲ್ ಶೌಚಾಲಯ, ಕೆಲವೊಂದು ಮನೆಯ ಶೌಚಾಲಯಗಳನ್ನು ಸ್ಥಳೀಯರು ಉಪಯೋಗಿಸುವಂಥಾಗಿದೆ.

ಮಧುಮೇಹ ಇರುವವರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಯಂತ್ರಿಸಲು ಸಾಧ್ಯವಾಗದೆ ಜನ ಖಾಲಿ ಬಾಟಲಿಗಳಲ್ಲಿ ಮೂತ್ರ ವಿಸರ್ಜಿಸಿ ಅದನ್ನು ಅಲ್ಲೆ ಇಡುತ್ತಿದ್ದಾರೆ. ಇದರಿಂದ ಸೊಳ್ಳೆ ಕಾಟವೂ ಹೆಚ್ಚುವ ಸಂದರ್ಭವಿದ್ದು ಸಾಂಕ್ರಾಮಿಕ ರೋಗ ಹರಡಲು ಕೂಡಾ ಪರೋಕ್ಷವಾಗಿ ಕಾರಣವಾಗುತ್ತಿದೆ.

ಜನರ ಮೂಲಭೂತ ಅವಶ್ಯಕತೆ ಆದ ಶೌಚಾಲಯದ ಬಗ್ಗೆಯೂ ಪಂಚಾಯತ್, ಸ್ಥಳೀಯ ಶಾಸಕರು ಗಮನವಹಿಸದೆ ಇರುವುದು ವಿಪರ್ಯಾಸ.

ಕಟಪಾಡಿ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕೂಡಲೇ ಸಾರ್ವಜನಿಕ ಶೌಚಾಲಯವನ್ನು ಜನರ ಉಪಯೋಗಕ್ಕೆ ಸಜ್ಜು ಮಾಡಿಕೊಡಬೇಕಾಗಿದೆ.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

17 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

17 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

17 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

17 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

18 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

2 days ago