ಕಟಪಾಡಿ : ಕರಾವಳಿಯಲ್ಲಿ ಈಗ ಮೀನಿನ ಸುಗ್ಗಿ – ಮಟ್ಟು ಬೀಚ್ ನಲ್ಲಿ ಕೈರಂಪಣಿ ಬಲೆಗೆ ಬಿತ್ತು ದೊಡ್ಡ ಗಾತ್ರದ ಭೂತಾಯಿ ಮೀನು – Vishwanews24
ಕಟಪಾಡಿ : ಕರಾವಳಿಯಲ್ಲಿ ಈಗ ಮೀನಿನ ಸುಗ್ಗಿ – ಮಟ್ಟು ಬೀಚ್ ನಲ್ಲಿ ಕೈರಂಪಣಿ ಬಲೆಗೆ ಬಿತ್ತು ದೊಡ್ಡ ಗಾತ್ರದ ಭೂತಾಯಿ ಮೀನು
ಕಟಪಾಡಿ: ಕರಾವಳಿಯಲ್ಲಿ ಈಗ ಮೀನಿನ ಸುಗ್ಗಿ, ಆಳಸಮುದ್ರದ ಮೀನುಗಾರಿಕಾ ಬೋಟ್ ಅಲ್ಲದೆ ತೀರದಲ್ಲಿ ಮೀನಿಗೆ ಬಲೆ ಹಾಕುವ ಮೀನುಗಾರರಿಗೂ ಹೇರಳ ಮೀನು ದೊರೆಯುತ್ತಿದೆ.
ಕಟಪಾಡಿ ಮಟ್ಟು ಬೀಚ್ ನಲ್ಲಿ ಭೂತಾಯಿ ಮೀನು ಸುಗ್ಗಿ ಶುಕ್ರವಾರ ಕಂಡು ಬಂದಿದೆ.
ಹನುಮ ದೀಕ್ಷಾ ಕೈರಂಪಣಿ ಮೀನುಗಾರಿಕೆ ಸಂದರ್ಭದಲ್ಲಿ ದೊಡ್ಡ ಗಾತ್ರದ ಭೂತಾಯಿ ಮೀನು ಬಲೆಯಲ್ಲಿ ಹಿಡಿಯಲಾಗಿದ್ದು, ಸುಮಾರು ನಾಲ್ಕು ಟನ್ ನಷ್ಟು ಮೀನು ಲಭಿಸುವ ಮೂಲಕ ಮೀನಿನ ಸುಗ್ಗಿಯೇ ಕಂಡು ಬಂದಿತ್ತು. ಸುದ್ದಿ ತಿಳಿದು ಸ್ಥಳಿಯರು ಸ್ಥಳಕ್ಕೆ ಧಾವಿಸಿದರು. ಬೂತಾಯಿ ಬಂಗುಡೆ ಕಲ್ಲೂರು ಸೇರಿದಂತೆ ವಿವಿಧ ಬಗೆಯ ಮೀನುಗಳು ಬಿದ್ದಿದು, ಒಂದು ಟನ್‌ಗೂ ಅಧಿಕ ಮೀನುಗಳ ಸಂಗ್ರಹವಾಗಿದೆ. ಸುದ್ದಿ ತಿಳಿದು ಸ್ಥಳಿಯರು ಸ್ಥಳಕ್ಕೆ ಧಾವಿಸಿದರು.

