ಕಟಪಾಡಿ ವರ್ತಕರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ ಗೆ ಗೌರವಾರ್ಪಣೆ-vishwanews24

Featured, ಉಡುಪಿ

ಕಟಪಾಡಿ : ಕಟಪಾಡಿ ವರ್ತಕರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ , ಆಶಾ ಕಾರ್ಯಕರ್ತರಿಗೆ ,ಕಟಪಾಡಿ ಉಪಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಕಾಪು ತಾಕೂಕು ಪತ್ರಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮ ಆದಿತ್ಯವಾರ ಕಟಪಾಡಿಯಲ್ಲಿ ನಡೆಯಿತು.

ವರ್ತಕರ ಸಂಘದ ಗೌರವಧ್ಯಕ್ಷ ದಿನಕರ ಶೆಟ್ಟಿ ಮಾತಾಡಿ ” ಕೊರೋನಾ ವಾರಿಯರ್ಸ್‌ ಪ್ರಾಣದ ಹಂಗು ತೊರೆದು ಸಮಾಜದ ಜಾಗೃತಿಕಾಗಿ ಕೊರೋನಾ ವಿರುದ್ಧ ಕೆಲಸ‌ ಮಾಡಿದ ವೈದ್ಯರು,ಆಶಾ ಕಾರ್ಯಕರ್ತೆಯರು,ನರ್ಸ್ಗಳು,ಪತ್ರಕರ್ತರು,ಪೋಲಿಸ್, ಗೌರವಿಸುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದರು.
ಕಟಪಾಡಿ ವರ್ತಕರ ಸಂಘದ ಅಧ್ಯಕ್ಷ ರಂಜನ್ ಹೆಗ್ಡೆ,ಪ್ರ.ಕಾರ್ಯದರ್ಶಿ ದುಗ್ಗಪ್ಪ ಜಿ ಬಂಗೇರ,ಕೋಶಾಧಿಕಾರಿ ಮಹೇಶ್ ಅಂಚನ್ ,ಉಪಾಧ್ಯಕ್ಷೆ ಪವಿತ್ರ ಶೆಟ್ಟಿ,ಎಸ್.ವಿ.ಎಸ್ ಶಾಲಾ‌ ಸಂಚಾಲಕ ಸತ್ಯೇಂದ್ರ ಪೈ,ಕಟಪಾಡಿ‌ ಶಂಕರ ಪೂಜಾರಿ,ಉಮೇಶ್ ಬಗ್ಗ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.