ಕಟೀಲು: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ತಿರುಗಾಟ ನವೆಂಬರ್ 16ರಂದು ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.
ಕಟೀಲು ಕ್ಷೇತ್ರದ ಆರು ಮೇಳಗಳಲ್ಲಿ 200ಕ್ಕೂ ಹೆಚ್ಚು ಕಲಾವಿದರು ಮತ್ತು 150ಕ್ಕೂ ಹೆಚ್ಚು ಸಹಾಯಕರು ಇದ್ದಾರೆ. ಇದೀಗ ಏಳನೇ ಮೇಳ ಹೊಸದಾಗಿ ಆರಂಭವಾಗುತ್ತಿರುವುದರಿಂದ ಹೊಸ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರನ್ನು ಸೇರಿಸಿಕೊಳ್ಳಲಾಗುತ್ತಿದೆ.
ಹೊಸ ಮೇಳದ ಆರಂಭದ ಹಿನ್ನೆಲೆಯಲ್ಲಿ ಮೂವತ್ತ ಮೂರರಷ್ಟು ಹೊಸ ಕಲಾವಿದರು ಈಗಾಗಲೇ ಸೇರ್ಪಡೆಗೊಂಡಿದ್ದಾರೆ. ಆದರೆ, ಇವರೆಲ್ಲರೂ ಹೊಸ ಮೇಳಕ್ಕೆ ಸೇರ್ಪಡೆಯಾದವರಲ್ಲ. ಈಗಾಗಲೇ ಇರುವ ಕಲಾವಿದರಲ್ಲಿ ಕೆಲವರು ಈ ಬಾರಿ ತಿರುಗಾಟಕ್ಕೆ ಬರುತ್ತಿಲ್ಲ. ಕೆಲವರಿಗೆ ಅನಾರೋಗ್ಯ, ಇನ್ನು ಕೆಲವರು ಬೇರೆ ಮೇಳ ಸೇರುವ ಕಾರಣ ನೀಡಿದ್ದಾರೆ. ಇದೀಗ ಸೇರ್ಪಡೆಯಾಗಿರುವ ಮೂವತ್ತರಷ್ಟು ಕಲಾವಿದರನ್ನು ಸೇರಿಸಿಕೊಂಡು ಒಂದಿಷ್ಟು ಬದಲಾವಣೆಗಳ ಮೂಲಕ ಹೊಸ ಮೇಳ ರೂಪುಗೊಳ್ಳಲಿದೆ ಎಂದು ತಿಳಿದುಬಂದಿದೆ.
ಹೊಸದಾಗಿ ಬಂದವರಲ್ಲಿ ಕೆಲವರು ಹವ್ಯಾಸಿಗಳಾಗಿ ಸಾಮರ್ಥಯ ಪ್ರದರ್ಶಿಸಿದವರು ಇದ್ದಾರೆ. ಕಟೀಲು ಮೇಳ ಬಿಟ್ಟು ಬೇರೆ ಮೇಳಕ್ಕೆ ಹೋಗಿ ವಾಪಸಾಗುವವರೂ ಇದ್ದಾರೆ. ಬೇರೆ ಮೇಳದಲ್ಲಿದ್ದು ಮೊದಲ ಬಾರಿ ಕಟೀಲು ಮೇಳದ ಸೇವೆಗೆ ಬಂದವರೂ ಇದ್ದಾರೆ.
ಹೊಸದಾಗಿ ಸೇರ್ಪಡೆ ಆದ ಕಲಾವಿದರು
ಹಿಮ್ಮೇಳ: ಬೆಳುವಾಯಿ ದೇವಾನಂದ ಭಟ್, ಅವಿನಾಶ್ ಬೈಪಡಿತ್ತಾಯ, ಹಿರಣ್ಮಯ ಹಿರಿಯಡ್ಕ, ಮೋಹನ ಶೆಟ್ಟಿಗಾರ್, ಗೋಪಾಲಕೃಷ್ಣ ಕಬಕ, ಸ್ತ್ರೀಪಾತ್ರ: ಅಕ್ಷಯ ಮಾರ್ನಾಡು, ಬೋಳಂತೂರು ಜಯರಾಮ ಶೆಟ್ಟಿ. ಹಾಸ್ಯ: ಮಿಜಾರು ತಿಮ್ಮಪ್ಪ, ಮುಮ್ಮೇಳ: ಸಂತೋಷ್ ಮಾನ್ಯ, ಭಾಸ್ಕರ ಎಕ್ಕಾರು, ಜೀವನ್ ಶೆಟ್ಟಿಗಾರ್‌ಕಿನ್ನಿಗೋಳಿ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಭುವನ್ ಶೆಟ್ಟಿ, ಹರೀಶ್ ಆಚಾರ್ಯ ಪಕ್ಷಿಕೆರೆ, ರಾಜೇಶ್ ಶೆಟ್ಟಿ ಮಾಳ, ಉತ್ತಮ್ ಪಡ್ಡು, ಸತೀಶ್ ದೈಗೋಳಿ, ಮಧುಸೂದನ್ ಪಚ್ಚನಾಡಿ, ದುರ್ಗಾಪ್ರಸಾದ್ ದೇವಾಡಿಗ, ಶ್ರೇಯಸ್ ರಾವ್, ಕೀರ್ತನ್ ನಾಯಕ್, ಮೋಹಿತ್, ರೋಹಿತ್, ಜನಾರ್ದನ ಬೆಳಾಲ್, ನಾರಾಯಣ ಸುವರ್ಣ, ಮುರಳೀಧರ ಪೆರ್ಲ, ಪ್ರಕಾಶ್ ನೀರ್ಚಾಲ್, ಸಂಗಮ್ ಶೆಟ್ಟಿಗಾರ್, ಕಾರ್ತಿಕ್ ಕಣಿಯೂರು, ಶ್ರೀಕುಮಾರ್ ಪೆರ್ಲ.
ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…
ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…
ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…
ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…
ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…
ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಡಿ.ಕೆ. ಶಿ ಸ್ಪಷ್ಟನೆ…