Featured

ಕಟೀಲು ಯಕ್ಷಗಾನ  ಮೇಳಗಳಿಗೆ 33 ಹೊಸ ಕಲಾವಿದರ ಸೇರ್ಪಡೆ – vishwanews24

ಕಟೀಲು ಯಕ್ಷಗಾನ  ಮೇಳಗಳಿಗೆ 33 ಹೊಸ ಕಲಾವಿದರ ಸೇರ್ಪಡೆ

ಕಟೀಲು: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ತಿರುಗಾಟ ನವೆಂಬರ್ 16ರಂದು ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.

ಕಟೀಲು ಕ್ಷೇತ್ರದ ಆರು ಮೇಳಗಳಲ್ಲಿ 200ಕ್ಕೂ ಹೆಚ್ಚು ಕಲಾವಿದರು ಮತ್ತು 150ಕ್ಕೂ ಹೆಚ್ಚು ಸಹಾಯಕರು ಇದ್ದಾರೆ. ಇದೀಗ ಏಳನೇ ಮೇಳ ಹೊಸದಾಗಿ ಆರಂಭವಾಗುತ್ತಿರುವುದರಿಂದ ಹೊಸ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರನ್ನು ಸೇರಿಸಿಕೊಳ್ಳಲಾಗುತ್ತಿದೆ.

ಹೊಸ ಮೇಳದ ಆರಂಭದ ಹಿನ್ನೆಲೆಯಲ್ಲಿ ಮೂವತ್ತ ಮೂರರಷ್ಟು ಹೊಸ ಕಲಾವಿದರು ಈಗಾಗಲೇ ಸೇರ್ಪಡೆಗೊಂಡಿದ್ದಾರೆ. ಆದರೆ, ಇವರೆಲ್ಲರೂ ಹೊಸ ಮೇಳಕ್ಕೆ ಸೇರ್ಪಡೆಯಾದವರಲ್ಲ. ಈಗಾಗಲೇ ಇರುವ ಕಲಾವಿದರಲ್ಲಿ ಕೆಲವರು ಈ ಬಾರಿ ತಿರುಗಾಟಕ್ಕೆ ಬರುತ್ತಿಲ್ಲ. ಕೆಲವರಿಗೆ ಅನಾರೋಗ್ಯ, ಇನ್ನು ಕೆಲವರು ಬೇರೆ ಮೇಳ ಸೇರುವ ಕಾರಣ ನೀಡಿದ್ದಾರೆ. ಇದೀಗ ಸೇರ್ಪಡೆಯಾಗಿರುವ ಮೂವತ್ತರಷ್ಟು ಕಲಾವಿದರನ್ನು ಸೇರಿಸಿಕೊಂಡು ಒಂದಿಷ್ಟು ಬದಲಾವಣೆಗಳ ಮೂಲಕ ಹೊಸ ಮೇಳ ರೂಪುಗೊಳ್ಳಲಿದೆ ಎಂದು ತಿಳಿದುಬಂದಿದೆ.

ಹೊಸದಾಗಿ ಬಂದವರಲ್ಲಿ ಕೆಲವರು ಹವ್ಯಾಸಿಗಳಾಗಿ ಸಾಮರ್ಥಯ ಪ್ರದರ್ಶಿಸಿದವರು ಇದ್ದಾರೆ. ಕಟೀಲು ಮೇಳ ಬಿಟ್ಟು ಬೇರೆ ಮೇಳಕ್ಕೆ ಹೋಗಿ ವಾಪಸಾಗುವವರೂ ಇದ್ದಾರೆ. ಬೇರೆ ಮೇಳದಲ್ಲಿದ್ದು ಮೊದಲ ಬಾರಿ ಕಟೀಲು ಮೇಳದ ಸೇವೆಗೆ ಬಂದವರೂ ಇದ್ದಾರೆ.

ಹೊಸದಾಗಿ ಸೇರ್ಪಡೆ ಆದ ಕಲಾವಿದರು
ಹಿಮ್ಮೇಳ: ಬೆಳುವಾಯಿ ದೇವಾನಂದ ಭಟ್, ಅವಿನಾಶ್ ಬೈಪಡಿತ್ತಾಯ, ಹಿರಣ್ಮಯ ಹಿರಿಯಡ್ಕ, ಮೋಹನ ಶೆಟ್ಟಿಗಾರ್, ಗೋಪಾಲಕೃಷ್ಣ ಕಬಕ, ಸ್ತ್ರೀಪಾತ್ರ: ಅಕ್ಷಯ ಮಾರ್ನಾಡು, ಬೋಳಂತೂರು ಜಯರಾಮ ಶೆಟ್ಟಿ. ಹಾಸ್ಯ: ಮಿಜಾರು ತಿಮ್ಮಪ್ಪ, ಮುಮ್ಮೇಳ: ಸಂತೋಷ್ ಮಾನ್ಯ, ಭಾಸ್ಕರ ಎಕ್ಕಾರು, ಜೀವನ್ ಶೆಟ್ಟಿಗಾರ್‌ಕಿನ್ನಿಗೋಳಿ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಭುವನ್ ಶೆಟ್ಟಿ, ಹರೀಶ್ ಆಚಾರ್ಯ ಪಕ್ಷಿಕೆರೆ, ರಾಜೇಶ್ ಶೆಟ್ಟಿ ಮಾಳ, ಉತ್ತಮ್ ಪಡ್ಡು, ಸತೀಶ್ ದೈಗೋಳಿ, ಮಧುಸೂದನ್ ಪಚ್ಚನಾಡಿ, ದುರ್ಗಾಪ್ರಸಾದ್ ದೇವಾಡಿಗ, ಶ್ರೇಯಸ್ ರಾವ್, ಕೀರ್ತನ್ ನಾಯಕ್, ಮೋಹಿತ್‌, ರೋಹಿತ್, ಜನಾರ್ದನ ಬೆಳಾಲ್, ನಾರಾಯಣ ಸುವರ್ಣ, ಮುರಳೀಧರ ಪೆರ್ಲ, ಪ್ರಕಾಶ್ ನೀರ್ಚಾಲ್, ಸಂಗಮ್ ಶೆಟ್ಟಿಗಾರ್, ಕಾರ್ತಿಕ್ ಕಣಿಯೂರು, ಶ್ರೀಕುಮಾರ್ ಪೆರ್ಲ.

Vishwa News 24

Recent Posts

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ – vishwanews24

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…

2 days ago

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ – vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…

2 days ago

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ – vishwanews24

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…

2 days ago

ಉಡುಪಿ : ವ್ಯಕ್ತಿ ನಾಪತ್ತೆ – vishwanews24

ಉಡುಪಿ : ವ್ಯಕ್ತಿ ನಾಪತ್ತೆ      ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…

2 days ago

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ – vishwanews24

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…

2 days ago

ಉಡುಪಿ : ಜು. 10 ರಂದು ನೇರ ಸಂದರ್ಶನ – vishwanews24

ಉಡುಪಿ : ಜು. 10 ರಂದು ನೇರ ಸಂದರ್ಶನ      ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…

2 days ago