ಕಡಬ: ಹೃದಯಾಘಾತಕ್ಕೆ ಉದ್ಯಮಿ ಬಲಿ.. vishwanews24

Featured, ಉಡುಪಿ

ಕಡಬ: ಹೃದಯಾಘಾತಕ್ಕೆ ಉದ್ಯಮಿ ಬಲಿ..

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಕೋಡಿಂಬಾಳದ ಯುವ ಉದ್ಯಮಿ ಯೋರ್ವರು ಹೃದಯಾಘಾತ ಕ್ಕೆ ಬಲಿಯಾಗಿದ್ದಾರೆ. ಯುವ ಉದ್ಯಮಿ ಸನೀಶ್ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಏಕಾಏಕಿ ಎದೆನೋವು ಕಾಣಿಸಿಕೊಂಡ ಅವರನ್ನು ಮಂಗಳೂರಿನ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಗಾಗಿ ದಾಖಲಿಸಲಾಗಿತ್ತು ಎನ್ನಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಯುವ ಉದ್ಯಮಿಯಾಗಿದ್ದ ಸನೀಶ್ ಸಾಮಾಜಿಕವಾಗಿ ಸಕ್ರಿಯವಾಗಿ ತೊಡಗಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.ಇವರ ನಿಧನಕ್ಕೆ ರಾಜಕೀಯ, ಸಾಮಾಜಿಕ ,ಧಾರ್ಮಿಕ ಮುಖಂಡರು‌ ಸಂತಾಪ‌ ಸೂಚಿಸಿದ್ದಾರೆ.ಮೃತರ ಅಂತ್ಯ ಸಂಸ್ಕಾರವು ಕೋಡಿಂಬಾಳದ ಸಂತ ಜೋರ್ಜ್ ಚರ್ಚಿನಲ್ಲಿಂದು ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ.

ಸೈಬರ್ ವಂಚನೆ : 17 ಲಕ್ಷ ರೂ. ಕಳೆದುಕೊಂಡ ಬ್ಯಾಂಕ್ ಉದ್ಯೋಗಿ – vishwanews24

Leave a Reply