ಕಡಲ್ಕೊರೆತ ಕಲ್ಲುಗಳು ಸಮುದ್ರಕ್ಕೆ..!
ಉಡುಪಿ : ಕಟಪಾಡಿ ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಪಡುಕೆರೆ ಶ್ರೀ ಪಂಡರಿನಾಥ ಭಜನಾ ಮಂದಿರ ಪರಿಸರದಲ್ಲಿ ಬಿರುಸುಗೊಂಡ ಸಮುದ್ರದ ಅಲೆಗಳ ಹಾವಳಿಯಿಂದ ತಡೆಗೋಡೆಗೆ ಬಳಸಲಾಗಿದ್ದ ಕಲ್ಲುಗಳು ಸಮುದ್ರ ಪಾಲಾಗುತ್ತಿದೆ. ಕಡಲ ಸೆರೆಗಳ ಸೆಳೆತಕ್ಕೆ ಕಾಂಕ್ರೀಟ್ ರಸ್ತೆಯೂ ಅಪಾಯದ ಅಂಚಿನಲ್ಲಿದ್ದು ಕಡಲು ಮತ್ತಷ್ಟು ಪ್ರಕ್ಷುಬ್ದಗೊಂಡಲ್ಲಿ ಸಂಪರ್ಕ ರಸ್ತೆಯೂ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

