ಉಡುಪಿ

ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು.. ಕಡಲ್ಕೊರೆತ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ

ಕಾಪು: ದಿನಬೆಳಗಾದರೆ ಕಡಲಿನ ಅಲೆಗಳನ್ನು ನೋಡುತ್ತ ಬದುಕಿದವರು ನಾವು. ಮಳೆಗಾಲ ಬಂದರೆ ಸಾಕು ನಾವು ಮನೆ ಬಿಟ್ಟು ಬದುಕಬೇಕಾದ ಪರಿಸ್ಥಿತಿ. ಕಡಲು ಯಾವಾಗ ಪ್ರಕ್ಷುಬ್ಧಗೊಳ್ಳುವುದೋ ಅನ್ನೋ ಭಯ. ಒಪ್ಪತ್ತಿನ ಊಟಕ್ಕೂ ನಾವು ಕಡಲ ಕಸುಬನ್ನು ಅವಲಂಬಿಸುವವರು.ಅಲೆಗಳ ಅಬ್ಬರಕ್ಕೆ ಬ್ರೇಕ್‌ ಹಾಕಲು ಏನಾದರೊಂದು ಮಾಡಿಕೊಡಿ ಅಂತಾ ಹಲವಾರು ವರ್ಷಗಳಿಂದ ಕಾಡಿಬೇಡಿ ದ್ದೇವೆ ಆದ್ರೆ ಪರಿಹಾರ ಮಾತ್ರ ಶೂನ್ಯ. ಹೀಗೆ ಅಳಲನ್ನು ಹೇಳಿಕೊಂಡವರು ಮಟ್ಟು ಪ್ರದೇಶದ ನಿವಾಸಿ ಅಶೋಕ್‌.

ಈ ಭಾಗದ ಜನರಿಗೆ ಮಳೆಗಾಲದಲ್ಲಿ ಕಡಲ ಕೊರೆತದ ಭಯ ಇದ್ದೇ ಇರುತ್ತದೆ. ಕಡಲ ಕಸುಬು ಮಾಡಿಕೊಂಡು ಜೀವನ ಸಾಗಿಸೋ ಇಲ್ಲಿನ ಜನರು ಮುಂಜಾನೆ ಬೆಳಕು ಹರಿಯುವ ಮೊದಲೇ ದುಡಿಮೆ ಆರಂಭಿಸುತ್ತಾರೆ. ಆದರೆ ಕಡಲು ಮನೆ ತನಕ ಬಂದು ಮನೆಯನ್ನು ಆಕ್ರಮಿಸಿಕೊಂಡರೆ ಅನ್ನೋದು ಎಂಬ ಕಡಲವಾಸಿಗಳನ್ನು ಕಾಡುತ್ತಲೇ ಇರುತ್ತದೆ.

ವರ್ಷಂಪ್ರತಿ ಜನಪ್ರತಿನಿಧಿಗಳಿಗೆ ಕಡಲ ಕೊರೆತಕ್ಕೊಂದು ಶಾಶ್ವತ ಪರಿಹಾರ ಒದಗಿಸಿಕೊಡಿ ಅಂತ ಬೇಡಿದಾಗ ಜಿಲ್ಲಾಡಳಿತದೊಂದಿಗೆ  ಸೇರಿಕೊಂಡು ಕಡಲಿಗೆ ಆಹಾರದಂತೆ ಕಲ್ಲು ತಂದು ಸುರಿದು ಕಿಸೆ ತುಂಬಿಸಿಕೊಂಡವರೇ ಹೆಚ್ಚು. ಆದ್ರೆ ಶಾಶ್ವತ ಪರಿಹಾರದ ಬಗ್ಗೆ ಯಾರೂ ಚಿಂತಿಸಿಲ್ಲ. ಈ ಬಾರಿ ನಮ್ಮ ಜನಪ್ರತಿನಿಧಿ ಅನಿಸಿಕೊಂಡ ನಮ್ಮ ಭಾಗದ ಶಾಸಕರು ನಮ್ಮ ಕಷ್ಟವನ್ನು ಅರಿತು ಸ್ಪಂದಿಸಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ  ಮುಂದಾಗಿ ಕಡಲ ಮಕ್ಕಳ ನೋವಿಗೆ ದನಿಯಾಗಿದ್ದಾರೆ. ನದಿ ತೀರದ ಪ್ರದೇಶದ ಜನರು ಕೂಡ ನದಿ ಕೊರೆತದಿಂದಾಗಿ ಸಮಸ್ಯೆಗೆ ಒಳಗಾಗಿದ್ದು ಇದೀಗ ಈ ಪ್ರದೇಶದಲ್ಲಿ ಸುತ್ತಲೂ ತಡೆಗೋಡೆ ಮತ್ತು ರಸ್ತೆ ನಿರ್ಮಾಣಗೊಂಡು ಜನರಿಗೆ ಬಹಳಷ್ಟು ಅನುಕೂಲವಾಗಿದೆ.

ಈ ಬಾರಿ ಜನಪ್ರತಿನಿಧಿಯೊಬ್ಬರು ಕಡಲಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿಕೊಂಡಿದ್ದಾರೆ. ಜಪಾನ್‌ ಮಾದರಿಯಲ್ಲಿ ಕಡಲ ಕೊರೆತ ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಕಡಲ ಮಕ್ಕಳಲ್ಲಿ ನೆಮ್ಮದಿ ಮೂಡಿಸಿದ್ದಾರೆ. ಜಪಾನ್‌ ಮಾದರಿಯ ತಂತ್ರಜ್ಞಾನದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕಾರ್ಯ ಕಾಪುವಿನ ಮಟ್ಟು ಉದ್ಯಾವರದ ವರೆಗೂ ನಡೆಯುತ್ತಿದೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago