ದಕ್ಷಿಣ ಕನ್ನಡ

ಮತ್ಸ್ಯ ನಾಡು ಮಂಗಳೂರಿನಲ್ಲಿ ಈ ಬಾರಿ ಯಾರ ಖದರ್?

ಮಂಗಳೂರು: ರಾಣಿ ಅಬ್ಬಕ್ಕ ಆಳಿದ ಉಳ್ಳಾಲವೀಗ ಹೆಸರು ಬದಲಾಯಿಸಿಕೊಂಡು ‘ಮಂಗಳೂರು’ ವಿಧಾನಸಭಾ ಕ್ಷೇತ್ರವಾಗಿದೆ. ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಿನಿಧಿಸುವ ಕ್ಷೇತ್ರವಿದು.

ಖಾದರ್ ತಂದೆ ಯು.ಟಿ.ಫರೀದ್ ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದವರು. ಅವರ ನಿಧನಾನಂತರ ಮಗ ಯು.ಟಿ.ಖಾದರ್ 2007ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು. ಬಳಿಕ 2008 ಹಾಗೂ 2013ರ ಚುನಾವಣೆಗಳಲ್ಲೂ ಅವರು ಗೆದ್ದರು. ಮುಸ್ಲಿಂ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 9 ಮುಸ್ಲಿಂ ಪ್ರತಿಸ್ಪರ್ಧಿಗಳೇ ಇದ್ದರೂ, 29,111 ಮತಗಳ ಅಂತರದಲ್ಲಿ ಖಾದರ್ ಗೆದ್ದು ಬಂದಿದ್ದು ವಿಶೇಷ.

ಅಭಿವೃದ್ಧಿ ಕಾರ್ಯಗಳಲ್ಲಿ ಖಾದರ್ ಮುಂಚೂಣಿಯಲ್ಲಿದ್ದಾರೆ. ರಾಜಕೀಯ ಬದುಕಿನ ಪ್ರಾರಂಭದಿಂದಲೂ ಕ್ಲೀನ್ ಇಮೇಜ್ ನಿರ್ವಹಿಸಿಕೊಂಡು ಬಂದಿರುವುದು ಅವರ ಚರಿಷ್ಮಾ ವೃದ್ಧಿಗೆ ಕಾರಣವಾಗಿದೆ. ರಾಜಕೀಯ ರಹಿತವಾಗಿ ಕೆಲಸ ಮಾಡುವ ಯತ್ನವನ್ನು ಮಾಡಿಕೊಂಡಿದ್ದಾರೆ. ಕ್ಷೇತ್ರದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿದೆ. ಆದರೆ, ಕೋಮುಗಲಭೆಗಳಲ್ಲಿ ಕೆಲವೊಮ್ಮೆ ಕೋಮುಶಕ್ತಿಗಳಿಗೆ ಖಾದರ್ ಬೆಂಬಲ ನೀಡುತ್ತಾರೆ ಎನ್ನುವುದು ಅವರ ವಿರೋಧಿಗಳ ಆರೋಪ. ಮುಸ್ಲಿಂ ಸಮುದಾಯದಲ್ಲೂ ಕೆಲವು ಕಡೆ ಖಾದರ್​ಗೆ ಕೆಲ ವಿಷಯಗಳಲ್ಲಿ ವಿರೋಧವಿದೆ.

ಜಾತ್ಯತೀತ ಜನತಾದಳ ನಗಣ್ಯ

ಕಾಂಗ್ರೆಸ್ ಮಾಜಿ ಮುಖಂಡ ಹಾಗೂ ಮಂಗಳೂರು ಮೇಯರ್ ಕೂಡ ಆಗಿದ್ದ ಕೆ.ಅಶ್ರಫ್ ತಿಂಗಳ ಹಿಂದೆಯಷ್ಟೇ ಜೆಡಿಎಸ್ ಸೇರಿ, ಮಂಗಳೂರಿನಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಅಶ್ರಫ್ ಒಂದಷ್ಟು ಮತ ಸೆಳೆಯಬಹುದಾದರೂ ಖಾದರ್​ಗೆ ಸೋಲುಣಿಸಲು ಸಾಧ್ಯವಾಗದು. ಈ ಬಾರಿ ಎಸ್​ಡಿಪಿಐ ಕೂಡ ಇಲ್ಲಿ ಸ್ಪರ್ಧಿಸುತ್ತಿಲ್ಲ. ಮಂಗಳೂರು ಸೇರಿ ದಕ್ಷಿಣ ಕನ್ನಡದ ಎಲ್ಲ 8 ಕ್ಷೇತ್ರಗಳಲ್ಲೂ ನೇರ ಫೈಟ್ ಇರುವುದು ಬಿಜೆಪಿ-ಕಾಂಗ್ರೆಸ್ ಮಧ್ಯೆ. ಇಲ್ಲಿ ಜೆಡಿಎಸ್ ಗಮನಾರ್ಹ ನಿರ್ವಹಣೆಯನ್ನೇನೂ ತೋರಿಲ್ಲ.

ಕುಡಿವ ನೀರು ಇಲ್ಲಿ ಸಮಸ್ಯೆ

ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾದುದು. ಇದೇ ಕ್ಷೇತ್ರದ ತುಂಬೆಯಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಾದರೂ ತುಂಬೆ ಆಸುಪಾಸಿನಲ್ಲೇ ಸಮಸ್ಯೆ ಗಂಭೀರವಾಗಿದೆ. ಉಳ್ಳಾಲ ಕಡಲತೀರದುದ್ದಕ್ಕೂ ಕಡಲ್ಕೊರೆತ ಸಮಸ್ಯೆ ಇದೆ. ಪ್ರಾಯೋಗಿಕವಾಗಿ ಬಮ್ರ್ ತಂತ್ರಜ್ಞಾನದ ಕಡಲ್ಕೊರೆತ ನಿರೋಧಕ ಕಾಮಗಾರಿ ನಡೆಸಿದ್ದರೂ ಪೂರ್ತಿ ಯಶಸ್ವಿಯಾಗಿಲ್ಲ. ಕ್ಷೇತ್ರದಲ್ಲಿ ತ್ಯಾಜ್ಯ ಸಮಸ್ಯೆಯೂ ಹೆಚ್ಚಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಯಾರಿಂದಲೂ ಆಗಿಲ್ಲ.

ನಾನಿರುವ ಜಾಗ ಹಿಂದೆ ವಿಟ್ಲ ಕ್ಷೇತ್ರ ವ್ಯಾಪ್ತಿ ಯಲ್ಲಿದ್ದಾಗ ಶಾಸಕರನ್ನು ದೂರದಿಂದಲೇ ನೋಡಬೇಕಾಗಿತ್ತು, ಆದರೆ, ಮಂಗಳೂರು ಕ್ಷೇತ್ರಕ್ಕೆ ಸೇರಿದ ಬಳಿಕ ನಾಲ್ಕು ಮನೆಯಿರುವಲ್ಲಿಗೂ ರಸ್ತೆ ಬಂದಿದೆ. ನೀರಿನ ಸಮಸ್ಯೆ ಪರಿಹಾರವಾಗಿದೆ.

| ಶರೀಫ್ ಸಿ.ಎಂ.ಪಟ್ಟೊರಿ ವರ್ತಕ, ನಡುಪದವು

ಒಮ್ಮೆ ಗೆದ್ದಿದ್ದ ಬಿಜೆಪಿ

ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆ ಮಾತ್ರ ಬಿಜೆಪಿ ಗೆದ್ದಿದೆ. ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವವರು ಸಂತೋಷ್ ಕುಮಾರ್ ರೈ ಬೊಳಿಯಾರ್. ಇವರು ಕ್ಷೇತ್ರದ ಬಿಜೆಪಿ ಅಧ್ಯಕ್ಷರು. ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯರಾದವರು. ಆ ಸಂದರ್ಭ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದವರು. ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಿಕೊಂಡವರು. ಹಿಂದು ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರೂ ಅಲ್ಪಸಂಖ್ಯಾತ ಮಿತ್ರರನ್ನೂ ಹೊಂದಿದವರು. ಕೊಚ್ಚಿನ್ ಮಂಗಳೂರು ಪೈಪ್​ಲೈನ್​ಗಾಗಿ ಜಾಗ ಕಳೆದುಕೊಳ್ಳುವವರ ಪರ ಹೋರಾಡಿ ಗರಿಷ್ಠ ಮೊತ್ತದ ಪರಿಹಾರ ಒದಗಿಸಿಕೊಡಲು ನೆರವಾದ ಹೆಸರಿದೆ. ಆದರೆ, ಕ್ಷೇತ್ರದ ವಿಸ್ತಾರಕ್ಕೆ ಅವರ ಹೆಸರು ಇನ್ನೂ ತಲಪಿಲ್ಲ. ವರ್ಚಸ್ಸು ಬೆಳೆಸುವ ಅವಶ್ಯಕತೆ ಇದೆ. ಆದರೆ, ಇದೆಲ್ಲದರ ಹೊರತಾಗಿಯೂ ಈ ಕ್ಷೇತ್ರದ ಜಾತಿ ಸಮೀಕರಣವೇ ಇವರಿಗೆ ಋಣಾತ್ಮಕ ಅಂಶ.

 

Vishwa News 24

Recent Posts

ಉಡುಪಿ: ಕಾಕ್ರೋಚ್ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ – vishwanews24

ಉಡುಪಿ: ಕಾಕ್ರೋಚ್’ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ ಉಡುಪಿ: ಚಳವಳಿಯ ಹೆಸರಿನಲ್ಲಿ ದೇಶದಲ್ಲಿ…

7 hours ago

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ – vishwanews24

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ ಕಾಪು : ಕಾಪುವಿನ ಹಿರಿಯ ಉದ್ಯಮಿ, ಧಾರ್ಮಿಕ, ಸಾಮಾಜಿಕ…

7 hours ago

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ – vishwanews24

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ ಉಡುಪಿ: ನಗರದ ಕಿನ್ನಿಮುಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಕಿದಿಯೂರು ಕ್ರೆಡಿಟ್…

9 hours ago

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ – vishwanews24

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ ಪಡುಬಿದ್ರಿ : ಹೆಜಮಾಡಿ ಟೋಲ್ನಲ್ಲಿ ಸ್ಥಳೀಯ…

9 hours ago

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ – vishwanews24

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ ಮಂಗಳೂರು: ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜುಲೈ…

9 hours ago

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮಂಗಳೂರು : ನಗರ ಹೊರವಲಯದ ಬೈಕಂಪಾಡಿಯ…

9 hours ago