ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯೇ …?? ಕಡಿಮೆ ಮಾಡಿಕೊಳ್ಳುವ ಸುಲಭ ಉಪಾಯಗಳು -Vishwanews24

Featured, ರಾಜ್ಯ ನ್ಯೂಸ್, ವಿಶೇಷ ಲೇಖನಗಳು

ನಮ್ಮ ದೇಹದ ಸೂಕ್ಷ್ಮ ಅಂಗಳಳಲ್ಲೊಂದು ಕಣ್ಣುಗಳು. ಆದರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್​ ಬಳಕೆಯಿಂದ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಕಣ್ಣಿನ ಅತಿಯಾದ ಶ್ರಮ ಒಂದಲ್ಲ ಒಂದು ವಿಧದಲ್ಲಿ ದೇಹಕ್ಕೆ ಅಹಿತಕರ.

ಸಾಮಾನ್ಯವಾಗಿ ಕಣ್ಣುಗಳಿಗೆ ನೀಡುವ ಅತಿಯಾದ ಶ್ರಮದಿಂದ ಕಣ್ಣು ಕೆಂಪಗಾಗುವುದು, ಕಣ್ಣುಗಳಲ್ಲಿ ಉರಿ, ಎದುರಿನ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಸಾಧ್ಯವಾಗುವುದು, ಹಗಲಿನ ಬೆಳಕನ್ನು ನೋಡಲಾಗದ ಸಮಸ್ಯೆಗಳು ಎದುರಾಗಬಹುದು. ಅದರಲ್ಲೂ ಸತತವಾಗಿ ಕಣ್ಣುಗಳಿಗೆ ಕೆಲಸ ನೀಡುವುದರಿಂದ ನಯನಗಳಲ್ಲಿ ನೀರು ತುಂಬಿರುತ್ತದೆ.

ಕಣ್ಣುಗಳು ತೇವಗೊಂಡಿದ್ದರೆ ಸಹ ನಿತ್ಯದ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಆದರೆ ಆಧುನಿಕ ಜೀವನಶೈಲಿಯಲ್ಲಿ ಕಂಪ್ಯೂಟರ್ ಬಳಕೆ ಅಥವಾ ಮೊಬೈಲ್​ಗಳಿಂದ ದೂರವಿರುವುದು ತುಸು ಕಷ್ಟ ಎನ್ನುವವರೇ ಹೆಚ್ಚು.

ಆದರೆ ನಿಮ್ಮ ಕಾರ್ಯಕ್ಕೆ ತಕ್ಕಂತೆ ಕೆಲ ಮನೆಮದ್ಧುಗಳನ್ನು ಸೇವಿಸುವ ಮೂಲಕ ನೇತ್ರಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನೆನಪಿರಲಿ. ಅವುಗಳೆಂದರೆ.

1. ರೋಸ್ ವಾಟರ್ ನಿಂದ ಕಣ್ಣು ಶುಚಿಗೊಳಿಸಿದರೆ ಕಣ್ಣು ತಂಪಾಗುವುದು, ಇದರಿಂದ ಕಣ್ಣು ಉರಿ ಉಂಟಾಗುವುದಿಲ್ಲ.

2. ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಉರಿ ಕಡಿಮೆಯಾಗುತ್ತದೆ.

3. ಆಲೂಗೆಡ್ಡೆ ಕತ್ತರಿಸಿ ಕಣ್ಣಿಗೆ ಇಟ್ಟರೆ ಕಣ್ಣಿನ ಉರಿ ಕಡಿಮೆಯಾಗುವುದು.

4.ಪ್ರತಿ ದಿನ ನೆಲ್ಲಿಕಾಯಿ ಜ್ಯೂಸ್​ ಅನ್ನು ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರವಾಗುತ್ತದೆ.

5.ಊಟದೊಂದಿಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುವುದರಿಂದ ಸಹ ಕಣ್ಣು ನೋವು ಕಡಿಮೆಯಾಗುತ್ತದೆ.

6. ಮಾವಿನಹಣ್ಣಿನ ಸೀಕರಣೆಯನ್ನು ಪ್ರತಿದಿನ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.

7.ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವಾಗ 1 ಗಂಟೆಯಲ್ಲಿ 2-3 ನಿಮಿಷ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ಸ್ವಲ್ಪ ದೂರಕ್ಕೆ ನೋಡುವುದು, ಕಣ್ಣು ಮಿಟುಕಿಸುವ ವ್ಯಾಯಾಮ ಒಳ್ಳೆಯದು.

8.ಮೊಸರಲ್ಲಿ ಬಾಳೆಹಣ್ಣನ್ನು ಕಿವುಚಿ ಪ್ರತಿದಿನ ತಿನ್ನುವುದು ಸಹ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಹೀಗೆ ನಿರಂತರ ಸೇವಿಸುವುದರಿಂದ ಕಣ್ಣು ಉರಿ ಕೂಡ ಕಡಿಮೆಯಾಗುತ್ತದೆ.

9.ಹೊರಗಿನಿಂದ ಬಂದ ತಕ್ಷಣ ಮುಖವನ್ನು ತೊಳೆಯಿರಿ, ಕಣ್ಣುನ್ನು ಶುದ್ಧ ನೀರಿನಲ್ಲಿ ತೊಳೆಯುವುದರಿಂದ ದೂಳಿನಿಂದ ಉಂಟಾಗುವ ಅಲರ್ಜಿ ಹೋಗಲಾಡಿಸಬಹುದು.

10.ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಂಪು ಮೂಲಂಗಿ ಮುಖ್ಯ ಪಾತ್ರವಹಿಸುತ್ತದೆ. ಇದನ್ನು ಆಹಾರದಲ್ಲಿ ಹೆಚ್ಚು ಬಳಸುವುದು ಉತ್ತಮ.

11.ಬದನೆಕಾಯಿ ಕೂಡ ನಯನಗಳ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ಕಡಿಮೆಯಾಗುತ್ತದೆ.

12.ವಿಪರೀತ ಕಣ್ಣು ಉರಿಯಿದ್ದರೆ, ಎದೆಹಾಲಿನಲ್ಲಿ ಉಪ್ಪಿನ ಹರಳನ್ನು ಕರಗಿಸಿ, ಕಣ್ಣಿಗೆ ಹಚ್ಚಿಕೊಳ್ಳುವುದು ಉತ್ತಮ.

13.ಬೇವು ಕೂಡ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಬೇವಿನ ಸೊಪ್ಪಿನ ರಸವನ್ನು ಕಣ್ಣುಗಳಿಗೆ ಹನಿ ಹನಿಯಾಗಿ ವಾರಕ್ಕೊಮ್ಮೆ ಹಾಕಿದರೆ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತದೆ.

ಇನ್ನು ಕಣ್ಣುಗಳ ಬಗ್ಗೆ ಪ್ರತಿದಿನ ಹೆಚ್ಚಿನ ಕಾಳಜಿವಹಿಸುವುದು ಉತ್ತಮ.