ಕದನ ವಿರಾಮ ಉಲ್ಲಂಘನೆಗೆ ಯಾವ ರೀತಿ ಉತ್ತರ ನೀಡಬೇಕೆಂಬುದು ನಮಗೆ ಗೊತ್ತಿದೆ : ಪಾಕ್ ಗೆ ಬಿಪಿನ್ ರಾವತ್ ಎಚ್ಚರಿಕೆ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಾಲಕೋಟ್’ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯರಾಗಿದ್ದು, ಮತ್ತೊಂದು ವಾಯುದಾಳಿಯಲ್ಲ ಅದಕ್ಕೂ ಮೀರಿದ ಕ್ರಮಕೈಗೊಳ್ಳುತ್ತೇವೆಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೋಮವಾರ ಎಚ್ಚರಿಸಿದ್ದಾರೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಭಾರತದ ಗಡಿಗಳಲ್ಲಿ 500ಕ್ಕೂ ಹೆಚ್ಚು ಉಗ್ರರು ಗಡಿ ದಾಟಲು ಸಿದ್ಧರಾಗಿ ನಿಂತಿದ್ದಾರೆ. ನಮ್ಮ ಗಡಿ ದಾಟುವ ಸಲುವಾಗಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇಂತಹ ಕದನ ವಿರಾಮ ಉಲ್ಲಂಘನೆಗೆ ಯಾವ ರೀತಿ ಉತ್ತರ ನೀಡಬೇಕೆಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಅಡಗಿ ಕುಳಿತಿರುವ ಉಗ್ರರು ಹಾಗೂ ಪಾಕಿಸ್ತಾನದಲ್ಲಿರುವ ಅವರ ಮುಖ್ಯಸ್ಥರ ನಡುವೆ ಸಂವಹನ ಸ್ಥಗಿತಗೊಂಡಿದೆ. ಆದರೆ, ಜನರಿಂದ ಜನರ ನಡುವಿನ ಸಂಪರ್ಕ ಇನ್ನೂ ಉಳಿದಿದೆ. ಸೇನೆ ಎಂತಹದ್ದೇ ಪರಿಸ್ಥಿತಿ ಎದುರಾದಲೂ ಅದನ್ನು ಎದುರಿಸಲು ಸಿದ್ಧವಾಗಿದೆ. ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.