ಕನ್ನಡದ ಖ್ಯಾತ ಲೇಖಕಿ, ಕಾದಂಬರಿಗಾರ್ತಿ ಆಶಾ ರಘು ನಿಧನ – vishwanews24
ಕನ್ನಡದ ಖ್ಯಾತ ಲೇಖಕಿ, ಕಾದಂಬರಿಗಾರ್ತಿ ಆಶಾ ರಘು ನಿಧನ
ಬೆಂಗಳೂರು: ಪ್ರಕಾಶಕಿ, ಸಾಹಿತಿ ಆಶಾ ರಘು (47) ಅವರು ಮಲ್ಲೇಶ್ವರದ 9ನೇ ಕ್ರಾಸ್‌ನ ತಮ್ಮ ಮನೆಯಲ್ಲಿ ಶನಿವಾರ ನಿಧನರಾದರು. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಆಶಾ ಅವರಿಗೆ ಪುತ್ರಿ ಇದ್ದಾರೆ. ಎರಡು ವರ್ಷಗಳ ಹಿಂದೆ ಆಹಾರ ತಜ್ಞ, ಪತಿ ಕೆ.ಸಿ.ರಘು ಅವರು ಮೃತಪಟ್ಟಿದ್ದರು.
ಮರಣೋತ್ತರ ಪರೀಕ್ಷಗೆ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿವೆ.
ವಿಚ್ಛೇದಿತ ಮಹಿಳೆಯನ್ನ ಮದುವೆಯಾಗಿ ವಂಚನೆ : ಚಿನ್ನಾಭರಣ ಸೇರಿ 36 ಲಕ್ಷ ರೂ. ಪಡೆದು ಎಸ್ಕೇಪ್ – vishwanews24
ಕಾದಂಬರಿಗಳು
‘ಆವರ್ತ’, ‘ಗತ’, ‘ಮಾಯೆ’, ‘ಚಿತ್ತರಂಗ’, ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, ‘ಆರನೇ ಬೆರಳು’, ‘ಬೊಗಸೆಯಲ್ಲಿ ಕಥೆಗಳು’, ‘ಅಪರೂಪದ ಪುರಾಣ ಕಥೆಗಳು’ ಮೊದಲಾದ ಕಥಾಸಂಕಲನಗಳನ್ನೂ, ‘ಚೂಡಾಮಣಿ’, ‘ಕ್ಷಮಾದಾನ’, ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು’ ‘ಪೂತನಿ ಮತ್ತಿತರ ನಾಟಕಗಳು’, ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ.
ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ಆಶಾ ರಘು ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಮಹತ್ವದ ಲೇಖಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
