ಕನ್ನಡ ಚಿತ್ರದಲ್ಲಿ ಹೆಸರು ಮಾಡಿ, ಈಗ ಕಿರುತೆರೆಯ ಮೂಲಕ ಮತ್ತೆ ನಟನೆಗೆ ಮರಳಿದ ಕಲಾ ಸಮ್ರಾಟ್ ಎಸ್‌.ನಾರಾಯಣ್‌ -Vishwanews24

Featured, ರಾಜ್ಯ ನ್ಯೂಸ್, ಸಿನಿಮಾ

ಕನ್ನಡ ಚಿತ್ರದಲ್ಲಿ ನಿರ್ದೇಶನ, ನಟನೆ ಹಾಗೂ ನಿರ್ಮಾಣದಲ್ಲಿ ಹೆಸರು ಮಾಡಿ ‘ಕಲಾ ಸಮ್ರಾಟ್‌’ ಎಂದೇ ಗುರುತಿಸಿಕೊಂಡಿರುವ ಎಸ್‌.ನಾರಾಯಣ್‌, ಕಿರುತೆರೆಯ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ. ಅವರು ಈ ಬಾರಿ ಜಿ. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಈಗ ‘ಪಾರು’ ಧಾರಾವಾಹಿಯಲ್ಲಿ ಹೊಸ ಕಥೆ ಎಳೆಯೊಂದು ಶುರುವಾಗಿದ್ದು, ಅದರಲ್ಲಿ ಬರುವ ವಿಭಿನ್ನ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಿದ್ದಾರೆ.

ವಿಶಿಷ್ಟ ಪಾತ್ರವೊಂದರ ಮೂಲಕ ಎಸ್. ನಾರಾಯಣ್ ಕಿರುತೆರೆಗೆ ಪ್ರವೇಶಿಸಿರುವುದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ಪಾರು’ ಧಾರಾವಾಹಿ ಸೋಮವಾರದಿಂದ – ಶುಕ್ರವಾರ ರಾತ್ರಿ 9:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.ಕನ್ನಡ ಚಿತ್ರದಲ್ಲಿ ನಿರ್ದೇಶನ, ನಟನೆ ಹಾಗೂ ನಿರ್ಮಾಣದಲ್ಲಿ ಹೆಸರು ಮಾಡಿ ‘ಕಲಾ ಸಮ್ರಾಟ್‌’ ಎಂದೇ ಗುರುತಿಸಿಕೊಂಡಿರುವ ಎಸ್‌.ನಾರಾಯಣ್‌, ಕಿರುತೆರೆಯ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ. ಅವರು ಈ ಬಾರಿ ಜಿ. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಅಖಿಲಾಂಡೇಶ್ವರಿ ತನ್ನ ಇಬ್ಬರು ಮಕ್ಕಳ ಅದ್ದೂರಿ ಮದುವೆಗೆ ತಯಾರಿ ನಡೆಸಿದ್ದರೆ; ಪ್ರೀತಮ್ ತನ್ನ ಪ್ರೀತಿ ಉಳಿಸಿಕೊಳ್ಳಲು ಸಜ್ಜಾಗಿದ್ದಾನೆ. ಅಣ್ಣ ಆದಿತ್ಯ ಮತ್ತು ಪಾರುವಿನ ಸಹಾಯ ತೆಗೆದುಕೊಂಡು ಅಮ್ಮನ ಮನವೊಲಿಸಿ ಪ್ರೀತಿಯನ್ನು ಗೆಲ್ಲಲು ತಯಾರಾಗಿದ್ದಾನೆ. ಆದಿ-ಪಾರು ಅಖಿಲಾಂಡೇಶ್ವರಿಯ ಒಪ್ಪಿಗೆ ಪಡೆದು ಪ್ರೀತುವಿನ ಪ್ರೀತಿಯನ್ನ ಉಳಿಸ್ತಾರಾ? ಆ ಪ್ರೀತಿಯನ್ನ ಉಳಿಸಲು ಅವರು ಯಾವೆಲ್ಲ ಸವಾಲುಗಳನ್ನ ಎದುರಿಸಬೇಕು ಎನ್ನುವುದು ವೀಕ್ಷಕರಿಗೆ ಕೌತುಕ ಸೃಷ್ಟಿಸಿದೆ.