ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಕಿಶೋರಿ ಬಲ್ಲಾಳ್ ವಿಧಿವಶ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು:: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಕಿಶೋರಿ ಬಲ್ಲಾಳ್ ಅವರು ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ..

ಕೆಲವು ದಿನಗಳಿಂದ ಅವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು.

ರಂಗಭೂಮಿ ಕಲಾವಿದೆಯಾಗಿ ಬೆಳಕಿಗೆ ಬಂದಿದ್ದ ಕಿಶೋರಿ ಬಲ್ಲಾಳ್ ಸುಮಾರು 72ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಕಿಶೋರಿ ಬಲ್ಲಾಳ್ ಅವರು ಮೂಲತಃ ದಕ್ಷಿಣ ಕನ್ನಡದ ಮಂಗಳೂರಿನವರು. ಬಲ್ಲಾಳ್ ಅವರು 1960ರಲ್ಲಿ ಬೆಳ್ಳಿತೆರೆಗೆ ಬಂದಿದ್ದ ಇವಳೆಂಥ ಹೆಂಡತಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸುಮಾರು ಹದಿನೈದು ವರ್ಷಗಳ ಸಿನಿ ಜೀವನದಲ್ಲಿ 72ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದರು.

ಬಾಲಿವುಡ್ ನ ಸ್ವದೇಶ ಸಿನಿಮಾದಲ್ಲಿ ಶಾರುಖ್ ಖಾನ್ ಜತೆ ಕಿಶೋರಿ ನಟಿಸಿದ್ದರು. ಭರತನಾಟ್ಯ ಕಲಾವಿದ ಶ್ರೀಪತಿ ಬಲ್ಲಾಳ್ ಅವರನ್ನು ಕಿಶೋರಿ ವಿವಾಹವಾಗಿದ್ದರು.