Featured

ಕನ್ನಡ ಚಿತ್ರ ರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿದು ರೇಟಿಂಗ್ ನಲ್ಲಿ ‘ಕೆಜಿಎಫ್’ ಮೀರಿಸಿ ಕನ್ನಡ ಚಿತ್ರದ ಹೊಸ ದಾಖಲೆ ಬರೆದ ಕಾಂತಾರ – Vishwanews24

ಕನ್ನಡ ಚಿತ್ರ ರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿದು ರೇಟಿಂಗ್ ನಲ್ಲಿ ‘ಕೆಜಿಎಫ್’ ಮೀರಿಸಿ ಕನ್ನಡ ಚಿತ್ರದ ಹೊಸ ದಾಖಲೆ ಬರೆದ ಕಾಂತಾರ

ಕೆಜಿಎಫ್1-8.2

ಕೆಜಿಎಫ್ 2- 8.4

ಚಾರ್ಲಿ 777- 9.0

ಕಾಂತಾರ – 9.5

ಬೆಂಗಳೂರು : ಗೆಲುವಿನ ಯಶಸ್ಸಿನ ಶಿಖರವೇರಿ ನಾಗಾಲೋಟ ಮುಂದುವರಿಸಿರುವ ‘ಕಾಂತಾರ’ ಚಿತ್ರ ರೇಟಿಂಗ್ ನಲ್ಲಿ ಕನ್ನಡ ಚಿತ್ರ ರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದೆ. IMDb ರೇಟಿಂಗ್ ನಲ್ಲಿ ಕೆಜಿಎಫ್ ಚಿತ್ರವನ್ನು ಮೀರಿಸಿದ್ದು,10 ರಲ್ಲಿ 9.5 ರೇಟಿಂಗ್ ಪಡೆದುಕೊಂಡಿದೆ.

ಈ ಹಿಂದೆ ಕೆಜಿಎಫ್1-8.2, ಕೆಜಿಎಫ್ 2- 8.4 ರೇಟಿಂಗ್ ಪಡೆದುಕೊಂಡಿತ್ತು. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777- 9.0 ರೇಟಿಂಗ್ ಪಡೆದು ಕೊಂಡಿತ್ತು.

ಕರಾವಳಿಯ ಕಂಬಳ ಮತ್ತು ಭೂತ ಕೋಲದ ಸಂಸ್ಕೃತಿಯನ್ನು ಒಳಗೊಂಡಿರುವ, ದೈವದ ಮಹಿಮೆಯನ್ನು ಸಾರುವ, ಪ್ರಕೃತಿಯ ದಟ್ಟ ಕಾಡಿನ ನಡುವಿನಲ್ಲಿರುವ ಹಳ್ಳಿಗರು ಮತ್ತು ದುಷ್ಟ ಶಕ್ತಿಗಳ ನಡುವಿನ ಹೋರಾಟ, ಅಲ್ಲಿ ಗಮನ ಸೆಳೆಯುವ ಕಥಾ ನಾಯಕ ‘ಶಿವ’ ನಾಗಿ ರಿಷಬ್ ಶೆಟ್ಟಿ ಸಾಟಿಯಿಲ್ಲದ ನಟನೆಯಿಂದ ವಿಶ್ವಾದ್ಯಂತ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಳೆ ಪ್ರಮಾಣವಚನ ಸ್ವೀಕಾರ – Vishwanews24

ಸೆಪ್ಟೆಂಬರ್ 30 ರಂದು ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ‘ಕಾಂತಾರ’ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು, ವಾರದೊಳಗೆ ಇತರ ಭಾಷೆಗಳಿಂದ ಭಾರಿ ಬೇಡಿಕೆ ಕಂಡು ಕೊಂಡು ಹಿಂದಿ ಯಲ್ಲಿ ಬಿಡುಗಡೆಯಾಗಿದ್ದು, ತಮಿಳು, ತೆಲುಗು ಮತ್ತು ಮಲಯಾಳಂ ನಲ್ಲೂ ತೆರೆಗೆ ಬರುತ್ತಿದೆ.

ಈಗಾಗಲೇ ದಿಗ್ಗಜ ನಟರು ಘಟಾನುಘಟಿ ರಾಜಕಾರಣಿಗಳು ಚಿತ್ರ ಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದ್ದಾರೆ. ಅನೇಕ ಪರಭಾಷಾ ದಿಗ್ಗಜ ನಟರೂ ರಿಷಬ್ ಗೆ ಹೊಗಳಿಗೆಯ ಹೂಮಳೆಯನ್ನೇ ಸುರಿಸಿದ್ದಾರೆ. ಕರಾವಳಿಯಲ್ಲಿ ಕಥಾ ವಸ್ತುವಾಗಿರುವ ದೈವದ ಮಹಿಮೆ, ಎಂದೂ ಚಿತ್ರ ಮಂದಿರದತ್ತ ಕಣ್ಣು ಹಾಯಿಸದವರನ್ನೂ ಚಿತ್ರಮಂದಿರದೊಳಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹಲವು ಮಂದಿ ಚಿತ್ರ ವೀಕ್ಷಿಸಿ 10 ರಲ್ಲಿ 10 ಅಂಕ ನೀಡಿದ್ದು “ವಿವರಿಸಲು ಪದಗಳಿಲ್ಲ.. ಅತ್ಯುತ್ತಮ ಸಿನಿಮಾ. ಎಲ್ಲರ ಶ್ರಮ ತೆರೆಯ ಮೇಲೆ ಕಾಣಿಸುತ್ತದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮುಂದಿನ ಹಂತವಾಗಿದೆ. ಬಿಜಿಎಂ ಮತ್ತು ಅಜನೀಶ್ ಅವರ ಹಾಡುಗಳು ಗೂಸ್‌ಬಂಪ್ಸ್ . ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಬೆಂಕಿ. ಸಪ್ತಮಿ ಗೌಡ ಅತ್ಯುತ್ತಮ ಮತ್ತು ರೋಮ್ಯಾಂಟಿಕ್ ಆಗಿದ್ದಾರೆ. ಹೊಸತನದ ಕಥೆಯೊಂದಿಗೆ ಶಿವ ಮತ್ತು ಗ್ಯಾಂಗ್‌ ಕಥೆಯನ್ನು ಚಲಿಸುವಂತೆ ಮಾಡುತ್ತದೆ. ಕೊನೆಯ ಕ್ಲೈಮ್ಯಾಕ್ಸ್ ಥಿಯೇಟರ್ ಅನುಭವದಲ್ಲೇ ನೋಡಲೇಬೇಕಾಗಿರುವುದು ದೈವಿಕ ಕ್ಷಣವಾಗಿದೆ. ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಮತ್ತು ಸಾಂಸ್ಕೃತಿಕವಾಗಿ ಆಳವಾಗಿ ಬೇರೂರಲಿದೆ ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Vishwa News 24

Recent Posts

ಸರ್ಕಾರಿ ನೌಕರರ ಬಡ್ತಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ತಮಿಳುನಾಡು ಸರ್ಕಾರದಿಂದ ಮಹತ್ವದ ಆದೇಶ – vishwanews24

ಸರ್ಕಾರಿ ನೌಕರರ ಬಡ್ತಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ತಮಿಳುನಾಡು ಸರ್ಕಾರದಿಂದ ಮಹತ್ವದ ಆದೇಶ ಚೆನ್ನೈ,: ರಾಜ್ಯದ ಎಲ್ಲಾ ಸರ್ಕಾರಿ…

2 hours ago

ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ – vishwanews24

ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ ಜೆರುಸಲೇಂ: ಫ್ಲೈದುಬೈ ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ…

2 hours ago

ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ – vishwanews24

ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ…

2 hours ago

ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ – vishwanews24

ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ 70…

2 hours ago

ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ – vishwanews24

ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ ಮೂಡುಬಿದಿರೆ : ಅ.11 ರಂದು…

3 hours ago

ಉಡುಪಿ: ಸರ್ಕಾರದ  ಗ್ಯಾರಂಟಿ ಯೋಜನೆಗಳ ಪ್ರಯೋಜನ ಬಿಜೆಪಿಯವರೂ ಪಡೆಯುತ್ತಿದ್ದಾರೆ : ಸುಧೀರ್ ಕುಮಾರ್ ಮರೋಳ್ಳಿ – vishwanews24

ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ‘ಸತ್ಯ ಮೇವ ಜಯತೆ’ ಬೃಹತ್ ಪ್ರತಿಭಟನಾ ಸಭೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ…

3 hours ago