ಕನ್ನಡ ಬಿಗ್ ಬಾಸ್ ಸೀಸನ್ 6 ಗೆ ತುಳಸಿ ಪ್ರಸಾದ್ : ಈತ ಬಿಗ್ ಬಾಸ್ ಗೆ ಬಂದ್ರೆ ನಾವ್ಯಾರು ಬರಲ್ಲ ಅಂತಿದ್ದಾರಂತೆ ಇತರೆ ಬಿಗ್ ಬಾಸ್ ಸ್ಪರ್ಧಿಗಳು..!!?

Featured, ರಾಜ್ಯ ನ್ಯೂಸ್

ಬಿಗ್​ಬಾಸ್​ ಸೀಸನ್​ 6 ಆರಂಭವಾಗುತ್ತಿದೆ. ಇನ್ನು ಬಿಗ್​ಬಾಸ್​ ಮನೆಗೆ ಯಾವ ಯಾವ ಸೆಲೆಬ್ರಿಟಿಗಳು ಎಂಟ್ರಿ ಆಗಲಿದ್ದಾರೆ ಎಂಬ ದೊಡ್ಡ ಕುತೂಹಲ ಇದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ತುಳಸಿ ಪ್ರಸಾದ್​ ಕೂಡ ಬಿಗ್​ಬಾಸ್​ ಸ್ಪರ್ಧಿಯಾಗಿ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಯೂ ಅಲ್ಲಲ್ಲಿ ಹರಿದಾಡುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರಂಗದ ಅಭಿಮಾನಿಗಳು ಮತ್ತು ಕನ್ನಡ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡಚಲನ ಚಿತ್ರದ ಹಾಡುಗಳನ್ನು ವಿಚಿತ್ರ ಸ್ಟೈಲ್​ನಲ್ಲಿ ಹಾಡುವ ಮೂಲಕ ಕನ್ನಡಾಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದ ತುಳಸಿ ಪ್ರಸಾದ್​ ಅವರನ್ನು ವ್ಯಕ್ತಿಯೊಬ್ಬರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ರಾತ್ರೋ ರಾತ್ರಿ ಡಬ್​ಸ್ಮ್ಯಾಷ್​ ಮೂಲಕ ಕನ್ನಡ ಚಲನಚಿತ್ರದ ಹಾಡುಗಳನ್ನುಹೇಗ್​ ಬೇಕೋ ಹಾಗೇ ಅವನದೇ ಸ್ಟೈಲ್​ನಲ್ಲಿ ಹಾಡುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಹಾಡಿರುವ ವಿಡಿಯೋವನ್ನು ಅಪ್​ಲೋಡ್​ ಮಾಡುತ್ತಾ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಯಾಗಿದ್ದರು. ಆ ನಂತರ ಖಾಸಗೀ ವಾಹಿನಿಯೊಂದು ಅವನನ್ನು ಸಂದರ್ಶನ ಮಾಡಿದ್ದೂ ಆಗಿದೆ. ಕನ್ನಡ ಸಾಹಿತ್ಯ ವನ್ನು ಹಾಳು ಮಾಡುತ್ತಿರುವ ಈ ಥರದವರನ್ನು ಬೆಂಬಲಿಸ ಬೇಡಿ, ಕಷ್ಟಪಟ್ಟು ಸಾಹಿತ್ಯ, ರಚಿಸಿ ಹಾಡಿರುವವರಿಗೆ ಅವಮಾನ ಮಾಡಿದಂತಿದೆ ಈತನ ಡಬ್​ಸ್ಮ್ಯಾಷ್​.

ಈತ ಬಿಗ್ ಬಾಸ್ ಗೆ ಬಂದ್ರೆ ನಾವ್ಯಾರು ಬರಲ್ಲ ಅಂತಿದ್ದಾರಂತೆ ಇತರೆ ಬಿಗ್ ಬಾಸ್ ಸ್ಪರ್ಧಿಗಳು..!!?

ನಿನ್ನೆಯಷ್ಟೇ ಕನ್ನಡ ಬಿಗ್ ಬಾಸ್ ಸೀಸನ್ 6ಕ್ಕೆ ಚಾಲನೆ ನೀಡುವಂತೆ ಕಲರ್ ಕನ್ನಡ ವಾಹಿನಿ ತಮ್ಮ ಮೊದಲ ಪ್ರೊಮೊವನ್ನ ರಿಲೀಸ್ ಮಾಡಿದೆ.. ಈಗಾಗ್ಲೇ‌ ಬಿಗ್ ಬಾಸ್ ಮನೆಗೆ ಯಾವ ಯಾವ ಸ್ಪರ್ಧಿ ಹೋಗಲ್ಲಿದ್ದಾರೆ ಅನ್ನೋ ಚರ್ಚೆಯು ಶುರುವಾಗಿಬಿಟ್ಟಿದೆ.. ಈ ನಡುವೆ ಹಲವರು ಬಿಗ್ ಬಾಸ್ ಗೆ ಹೋಗೋಕೆ ಏನೇನೊ ಕಸರತ್ತುಗಳನ್ನ ಶುರು ಮಾಡಿಕೊಂಡಿದ್ದಾರೆ.

ಹೇಗಾದ್ರೆ ಬಿಗ್ ಬಾಸ್ ಕಾರ್ಯಕ್ರಮದ ಬಿಗ್ ಬಾಸ್ ಗಮನವನ್ನ ಸೆಳೆದು ಬಿಗ್ ಬಾಸ್ ಮನೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ .. ಅದರಲ್ಲೂ ಕಳೆದ ಬಾರಿ‌ ಡಬ್ಷ್ಮ್ಯಾಶ್ ಕ್ವೀನ್ ನಿವೇದಿತಾ ಗೌಡ ಬಿಗ್ ಬಾಸ್ ಮನೆಗೆ ಹೋದಮೇಲಂತೂ ದೊಡ್ಡಮನೆಗೆ ತಾವೂ ಹೋಗಬಹುದು ಅನ್ನೋ ಹಂಬಲ ಸಾಮಾನ್ಯರಲ್ಲಿ ಶುರುವಾಗಿದ್ದು , ಈಗ ಫೇಸ್ ಬುಕ್ , ಇಸ್ಟಾಗ್ರಾಂ ಪೂರ ಹೆಸರು ಮಾಡಿದವರು ಬಿಗ್ ಬಾಸ್ ಗೆ ಶತಾಯಗತಾ ಹೋಗಬೇಕು ಅಂತ ಕಾತುರರಾಗಿದ್ದಾರೆ .

ಈ ಸಾಲಿನಲ್ಲಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿರುವ ಯುವಕ , ತನ್ನ ಪ್ರರಿಶ್ರಮದ ಮೂಲಕ ಈ ಮಟ್ಟಿಗೆ ಹಾಡಲು ಕಲಿತಿದ್ದೇನೆ ಎಂದು ಹೇಳಿಕೊಳ್ಳುವ , ಟ್ರೋಲ್ ಪೇಜ್ ಗಳಿಂದ ಅಣ್ಣ ಅಂತ ಕರೆಸಿಕೊಳ್ಳುವ ತುಳಸಿ ಪ್ರಸಾದ್ ಸಹ ಇದ್ದು ಅಪ್ಪಿತಪ್ಪಿ ಬಿಗ್ ಬಾಸ್ ಕದ ತಟ್ಟಿ ಬಿಡ್ತಾರೆ ಅನ್ನೋ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ .

ಹೀಗಾಗೆ ಬಿಗ್ ಬಾಸ್ ಗೆ ಹೋಗಲು ಇಚ್ಛಿಸಿರುವ ಇತರ ಸ್ಪರ್ಧಿಗಳು ತುಳಸಿ ಪ್ರಸಾದ್ ಬಿಗ್ ಬಾಸ್ ಮನೆಗೆ ಬಂದು ಕೊನೆಯವರೆಗೂ ಉಳಿದು ಬಿಟ್ರೆ ಹೇಗಾಪ್ಪ ಅವರ ಸುಮಧುರ ಕಂಠವನ್ನ ಕೇಳುವುದು ಅಂತ ಯೋಚನೆ ಮಾಡುವಂತಾಗಿದೆ .. ಈ ನಡುವೆ ವಾಹಿನಿಯವರು ಈ ಬಾರಿ ಸಾಮಾನ್ಯರಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ನೀಡಲಿರೋದು ಅನುಮಾನ ಅನ್ನೋ ಮಾತುಗಳಿದ್ದು , ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಯಾರ್ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ .