ಕರಾವಳಿಯಲ್ಲಿ ಧೂಳಿನ ಮಳೆ !

Featured, ದಕ್ಷಿಣ ಕನ್ನಡ

ದಕ್ಷಿಣ ಕನ್ನಡ: ಕರಾವಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮುಂಗಾರು ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಈಗ ಧೂಳಿನ ಮಳೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಜೂ.29ರಂದು ರಾತ್ರಿ 8ರಿಂದ 10ಗಂಟೆವರೆಗೆ ಧೂಳಿನ ಮಳೆ ಬಿದ್ದಿದೆ. ಕೇವಲ ಧೂಳು ಮಾತ್ರ ಆಕಾಶದಿಂದ ಬೀಳುತ್ತಿರುವುದನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಈ ಮಳೆಯಿಂದ ಸುತ್ತಮುತ್ತಲೂ ಬೂದಿಯ ವಾಸನೆ ಹರಡಿದೆ ಎನ್ನಲಾಗಿದೆ.