Featured

ಕರಾವಳಿಯ ಯುವ ಪ್ರತಿಭಾವಂತ ಕಲಾವಿದರುಗಳ ಮೊದಲ ಪ್ರಯತ್ನ “ಮಚ್ಚಾ ನೀನ್ ಬದುಕ್ಬೇಕಾ?” ಚಲನಚಿತ್ರದ ಪೋಸ್ಟರ್ ಬಿಡುಗಡೆ – ಸದ್ಯದಲ್ಲೇ ತೆರೆಗೆ -Vishwanews24

ಕರಾವಳಿಯ ಯುವ ಪ್ರತಿಭಾವಂತ ಕಲಾವಿದರುಗಳ ಮೊದಲ ಪ್ರಯತ್ನ “ಮಚ್ಚಾ ನೀನ್ ಬದುಕ್ಬೇಕಾ?” ಚಲನಚಿತ್ರದ ಪೋಸ್ಟರ್ ಬಿಡುಗಡೆ – ಸದ್ಯದಲ್ಲೇ ತೆರೆಗೆ -Vishwanews24

ಬೆಂಗಳೂರು : ಕರಾವಳಿಯ ಯುವಕಲಾವಿದರು ಮತ್ತು ಕನ್ನಡದ ಕೆಲ ಹಿರಿಯ ಕಿರುತೆರೆ ಕಲಾವಿದರು ನಟಿಸಿರುವ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್‍ನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

ಕರಾವಳಿಯ ಕಲಾವಿದರು ಹಾಗೂ ರಂಗಭೂಮಿಯ ಕೆಲ ಹಿರಿಯ ಕಲಾವಿದರು ಸೇರಿ ಅಭಿನಯಿಸಿರುವ ಕನ್ನಡದ ಚಲನಚಿತ್ರದ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಮೊದಲ ಪೋಸ್ಟರ್‍ನ್ನು ಇಂದು ಬಿಡುಗಡೆ ಮಾಡಿದ್ದು, ಯುವ ಕಲಾವಿದರಾದ ರಮೇಶ್ ಶೆಟ್ಟಿ, ಸುರೇಶ್ ಮಲ್ಪೆ, ಶರಣ್ ಉದ್ಯಾವರ ಹಾಗೂ ಅನೇಕ ಯುವ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.

ಮಂಗಳೂರು ,ಪೆಣಂಬೂರು ಜೊತೆಗೆ ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಹಾಡನ್ನು ಸಹ ಈಗಾಗಲೇ ಚಿತ್ರತಂಡ ಚಿತ್ರೀಕರಣ ಮುಗಿಸಿರುತ್ತದೆ.

ಮೂಲತಃ ಭಟ್ಕಳ ನಿವಾಸಿಯಾದ ಜಗದೀಶ್ ಡಿ ಎನ್, ಭಟ್ಕಳ್ ರವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿರುವ ಹೊಸ ಕನ್ನಡ ಚಿತ್ರ ಇದಾಗಿದ್ದು, ಯುವ ಪ್ರತಿಭೆಗಳಾದ ಮುರುಡೇಶ್ವರದ ಆನಂದ ನಾಯ್ಕ್ ಎನ್ನುವವರು ಸಹ ಚಿತ್ರದ ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿರುತ್ತಾರೆ. ಜೊತೆಗೆ ಮಂಗಳೂರಿನ ಉಮಾ ಮಹೇಶ್ವರ ಸಹ-ನಿರ್ಮಾಪಕರು, ಜೈರಾಮ್ ಶೆಟ್ಟಿ ಕುಂದಾಪುರ.

ಲಾಕ್ ಡೌನ್ ಸಂದರ್ಭದಲ್ಲಿ ಶೇಕಡಾ 60ರಷ್ಟು ಚಿತ್ರೀಕರಣ ಮುಗಿಸಿರುವ ಈ ಚಿತ್ರ ತಂಡ ಅಗಷ್ಟ್ ತಿಂಗಳ ಒಳಗೆ ಪೋಸ್ಟ್ ಪ್ರೋಡಕ್ಷನ್ ಕೆಲಸವನ್ನು ಮುಗಿಸಿ ಸೆಪ್ಟೆಂಬರ್ ಅಂತ್ಯದ ಒಳಗೆ ಚಿತ್ರದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದು ಐಷಾರಾಮಿ ಜೀವನದ ಆಸೆಗೆ ಕುಟುಂಬಕ್ಕೆ ಆಸರೆ ಆಗಬೇಕಾದ ಒಬ್ಬ ಮಧ್ಯಮ ಕುಟುಂಬದ ಕಾಲೇಜು ಯುವಕ ಹೇಗೆ ಬೆಂಗಳೂರಿನಲ್ಲಿ ಪರಿಸ್ಥಿತಿಗೆ ಬದಲಾಗಿ ಜೀವನದಲ್ಲಿ ಎನಾಗುತ್ತಾನೆ ಎಂಬ ಕಥಾವಸ್ತು ಇದಾಗಿದ್ದು , ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸಂದೇಶಗಳನ್ನು ಸೇರಿಸಲಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಕೊರೊನಾದಿಂದ ಪೊಸ್ಟ್ ಪ್ರೊಡಕ್ಷನ್ ಹಾಗೂ ಔಟ್ ಡೋರ್ ಚಿತ್ರೀಕರಣ ಮುಂದೆ ಹೋಗಿದ್ದ ಕಾರಣ, ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

ನಮ್ಮ ಕರಾವಳಿಯಲ್ಲಿರುವ ಪ್ರತಿಯೊಬ್ಬರು  ಯುವಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ರಾಜ್ಯಮಟ್ಟದಲ್ಲಿ ಇವರನ್ನು ಇನ್ನೊಮ್ಮೆ ಗುರುತಿಸುವ ಹಾಗೆ ಆಗಲಿ ಎಂದು ಭಟ್ಕಳದ ಜಗದೀಶ್.ಡಿ.ಎನ್ ತಿಳಿಸಿದ್ದಾರೆ

ನಮಸ್ಕಾರ ಸ್ನೇಹಿತರೆ, ಇದು ನಮ್ಮ ಉತ್ತರ ಕನ್ನಡದ ಅನೇಕ ಯುವ ಪ್ರತಿಭೆಗಳ ಮೊದಲ ಪ್ರಯತ್ನ *ಮಚ್ಚ ನೀನ್ ಬದುಕ್ಬೇಕಾ?..* ಹಾಗೂ ನಮ್ಮ ಚಿತ್ರದ ಮೊದಲ ಪೊಸ್ಟರ್.ನಿಮ್ಮ ಸ್ನೇಹಿತರಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಲಕ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ನೀಡಿ ಈ ಮೂಲಕ ನಮ್ಮ ಈ ಮೊದಲ ಪ್ರಯತ್ನಕ್ಕೆ ಬೆಂಬಲವಾಗಿ ಜೊತೆಗಿರಲು ಬಯಸುತ್ತೇವೆ ಧನ್ಯವಾದಗಳು..

AJ Creative Minds 2020

 

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago