ಕರ್ತವ್ಯದ ವೇಳೆ  ಹೃದಯಾಘಾತ ; ಪೊಲೀಸ್ ಪೇದೆ ಸಾವು – vishwanews24

Featured, ರಾಜ್ಯ ನ್ಯೂಸ್

ಕರ್ತವ್ಯದ ವೇಳೆ  ಹೃದಯಾಘಾತ ; ಪೊಲೀಸ್ ಪೇದೆ ಸಾವು

ಬೀದರ್ : ಕರ್ತವ್ಯದ ವೇಳೆಯೇ ಪೊಲೀಸ್ ಪೇದೆಗೆ ಹೃದಯಾಘಾತ ಸಂಭವಿಸಿದ್ದು, ಕೆಲವೇ ಕ್ಷಣಗಳಲ್ಲಿ ಪೊಲೀಸ್ ಸಾವಿಗೀಡಾಗಿರುವ ಘಟನೆ ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ರಾಯಚೂರು ಮೂಲದ ಯುವಕ ಕಳೆದ 5 ವರ್ಷದ ಹಿಂದೆ ಪೊಲೀಸ್ ಪೆದೆಯಾಗಿ ಬೀದರ್‌ಗೆ ನೇಮಕಗೊಂಡಿದ್ದಾನೆ. ತಂದೆ, ತಾಯಿ ಕುಟುಂಬವನ್ನೆಲ್ಲಾ ಬಿಟ್ಟು ಬೀದರ್‌ನ  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಆದರೆ, ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೊಲೀಸ್ ಆನ್‌ ಡ್ಯೂಟಿಯಲ್ಲಿದ್ದಾಗಲೇ ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪೊಲೀಸ್ ಪೇದೆ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿ-ದಕ ವಿಧಾನ ಪರಿಷತ್ ಉಪ ಚುನಾವಣೆಯ ಸೀಟ್ ಘೋಷಣೆ : ಕುಯಿಲಾಡಿ ಸುರೇಶ್ ನಾಯಕ್ ಬಂಡಾಯ..?? vishwanews24

ಮೃತ ಪೊಲೀಸ್ ಪೇದೆ ಚಂದ್ರಶೇಖರ್ (28) ಆಗಿದ್ದಾರೆ. ಇವರು ರಾಯಚೂರು ತಾಲೂಕಿನ ತಲಮಾರಿ ಗ್ರಾಮದವರಾಗಿದ್ದರು. 2018ರ ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ನೇಮಕವಾಗಿದ್ದರು. ಕಳೆದ 5 ವರ್ಷಗಳಿಂದ ನಾಗರಿಕ ಪೊಲೀಸ್ ಪೇದೆಯಾಗಿ ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Leave a Reply