Featured

ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್‌ ಕೊಟ್ಟಿದ್ದು ನಾನೇ : ಕುಮಾರಸ್ವಾಮಿ -Vishwanews24

ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್‌ ಕೊಟ್ಟಿದ್ದು ನಾನೇ, ಅವರಿಂದ ನನ್ನನ್ನು ಏನೂ ಮಾಡಲು ಆಗುವುದಿಲ್ಲ : ಕುಮಾರಸ್ವಾಮಿ -Vishwanews24

ರಾಮನಗರ: ‘ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್‌ ಕೊಟ್ಟಿದ್ದು ನಾನೇ. ಅವರಿಂದ ನನ್ನನ್ನು ಏನೂ ಮಾಡಲು ಆಗುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘2006ರಲ್ಲಿ ಬಿಜೆಪಿಯವರೆಲ್ಲ ಮಂಗನ ತರ ಇನ್ನೊಂದು ಪಕ್ಷಕ್ಕೆ ಹಾರಲು ರೆಡಿಯಾಗಿದ್ದರು. ಇದೇ ಯಡಿಯೂರಪ್ಪ ಅರ್ಜಿ ಹಾಕಿಕೊಂಡು ನನ್ನ ಹತ್ತಿರ ಬಂದಿದ್ದರು. ನನ್ನನ್ನು ಮಂತ್ರಿ ಮಾಡಿ. ಬಿಜೆಪಿಗೆ ರಾಜೀನಾಮೆ ಕೊಡುತ್ತೇನೆ ಎಂದು ಅಂಗಲಾಚಿದ್ದರು’ ಎಂದು ದೂರಿದರು.

ಚಳಿಗಾಲದ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಸ್ವಲ್ಪ ಮಟ್ಟದ ಇಳಿಕೆಯಾಗಲಿದೆ : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ -Vishwanews24

‘ರಾಮನಗರ ಜಿಲ್ಲೆಯಿಂದ ನನ್ನನ್ನು ಖಾಲಿ ಮಾಡಿಸಲು ಎಲ್ಲ ಒಟ್ಟಾಗಿ ನಿಂತಿದ್ದಾರೆ. ಆದರೆ ದೇವೇಗೌಡರ ಕುಟುಂಬದವರ ಕೊಡುಗೆ ಏನೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಒಡೆದಿಲ್ಲ. ಜನರ ಹಣ ಲೂಟಿ ಮಾಡಿಲ್ಲ. ನಾನು ಈ ಮಣ್ಣಿನ ಮಗ. ನನ್ನ ಅಂತಿಮ ಕಾಲ ರಾಮನಗರದಲ್ಲಿಯೇ’ ಎಂದರು.

ಸಚಿವ ಸಿ.ಪಿ. ಯೋಗೇಶ್ವರ್‌ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ‘ಆತ ಜನರ ತಲೆ ಹೊಡೆದ ಹಣದಲ್ಲಿ ಮಂತ್ರಿ ಆಗಿದ್ದಾನೆ. ಮೆಗಾ ಸಿಟಿ ಹೆಸರಲ್ಲಿ ಜನರಿಗೆ ಸೈಟು ಕೊಡುತ್ತೇನೆ ಎಂದು ಹೇಳಿ ಅವರ ಹಣವನ್ನು ಲೂಟಿ ಮಾಡಿದ್ದಾನೆ. ಯಡಿಯೂರಪ್ಪನನ್ನು, ಆರ್‌ಎಸ್ಎಸ್‌ ನಾಯಕರನ್ನು ಮೆಚ್ಚಿಸಲು ಮಾತನಾಡುತ್ತಾನೆ. ನನ್ನ ಬಯ್ದುಕೊಂಡು ಹೊಟ್ಟೆಪಾಡು ಮಾಡ್ತಿದ್ದಾನೆ. ಚನ್ನಪಟ್ಟಣದಲ್ಲಿ ನನ್ನನ್ನು ಏನೂ ಮಾಡಲು ಆಗಲ್ಲ ಎನ್ನುವುದು ಆತನಿಗೆ ಚೆನ್ನಾಗಿ ಗೊತ್ತಿದೆ’ ಎಂದರು.

‘ಚನ್ನಪಟ್ಟಣ ಈಗಾಗಲೇ ಆತನ ಕೈಬಿಟ್ಟು ಹೋಗಿದೆ. ಇಲ್ಲಿನ ಜನ ಆತನನ್ನು ದೂರ ಇಟ್ಟಿದ್ದಾರೆ. ಮುಂದಿನ ರಾಜಕೀಯ ಭವಿಷ್ಯ ಏನು ಎಂಬುದು ಆತನನ್ನು ಕಾಡುತ್ತಿದೆ. ಹೀಗಾಗಿ ಮಂಗಳೂರಿಗೆ ಹೋಗಿ ಅಲ್ಲಿನ ಬಗ್ಗೆ ಹೇಳದೇ ಚನ್ನಪಟ್ಟಣದ ಬಗ್ಗೆ ಮಾತನಾಡಿದ್ದಾನೆ. ಈ ಹಿಂದೆ ಹುಣಸೂರಿಗೆ ಹೋಗಿ ಸೀರೆ ಹಂಚಿ ಜನರ ಕೇಳುವ ಪ್ರಯತ್ನ ನಡೆಸಿದ್ದ. ಇದೇ ವ್ಯಕ್ತಿ ಚನ್ನಪಟ್ಟಣದಲ್ಲಿ ಕೊರೊನಾ ಬಂದಾಗ ಎಲ್ಲಿ ಹೋಗಿದ್ದ’ ಎಂದು ಪ್ರಶ್ನಿಸಿದರು.

2018ರಿಂದ 2020ರವರೆಗಿನ ಮೂರು ಸಾಲುಗಳ ತುಳು ಅಕಾಡೆಮಿ ಪ್ರಶಸ್ತಿ ಪ್ರಕಟಸಿ, ಮಾರ್ಚ್ 7ರಂದು ಬೆಂಗಳೂರಿನಲ್ಲಿ ವಿತರಣೆ -Vishwanews24

‘ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸಿದಾಗ ಈತ ಹುಟ್ಟಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಅದೇ ಜಲಾಶಯದಿಂದ ನೀರು ತುಂಬಿಸಿ ಆಧುನಿಕ ಭಗೀರಥ ಎಂದು ಬೋರ್ಡು ಹಾಕಿಸಿಕೊಂಡಿದ್ದಾನೆ. ನೀನು ಕಲಾವಿದರ ಕೋಟಾದಲ್ಲಿ ಆಯ್ಕೆ ಆಗಿದ್ದೀಯಾ. ರಾಜ್ಯದಲ್ಲಿ ಸಾಕಷ್ಟು ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಮೊದಲು ಅವರ ಕಷ್ಟ ನೋಡಿಕೋ. ಚನ್ನಪಟ್ಟಣ ನೋಡಿಕೊಳ್ಳಲು ನಾನಿದ್ದೇನೆ’ ಎಂದರು.

 

Vishwa News 24

Recent Posts

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು – vishwanews24

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು ಸುಳ್ಯ,: ತಾಲೂಕಿನ ನಿಂತಿಕಲ್ಲು ಬಳಿ ವಿದ್ಯುತ್ ಕಂಬಕ್ಕೆ ಬೈಕ್…

9 minutes ago

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ – vishwanews24

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…

2 hours ago

ಕರಾವಳಿ ಜಿಲ್ಲೆಯಲ್ಲಿ ಮುಂದಿನ ಎರಡು – ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ – vishwanews24

ಕರಾವಳಿ ಜಿಲ್ಲೆಯಲ್ಲಿ ಮುಂದಿನ ಎರಡು-ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು: ದಕ್ಷಿಣ ಕನ್ನಡ, ಉಡುಪಿ…

2 hours ago

ಡಿವೈಡರ್‌ಗೆ ಕಾರು ಡಿಕ್ಕಿ : ಖ್ಯಾತ ನಟಿ  ಮಾಡೆಲ್ ಹರ್ಷಿಲ್ ಕಾಲಿಯಾ ಸಾವು – vishwanews24

ಡಿವೈಡರ್‌ಗೆ ಕಾರು ಡಿಕ್ಕಿ :  ಭೀಕರ ಅಪಘಾತದಲ್ಲಿ ಖ್ಯಾತ ನಟಿ  ಮಾಡೆಲ್ ಹರ್ಷಿಲ್ ಕಾಲಿಯಾ ಸಾವು ಜೈಪುರ: ಜೈಪುರದಲ್ಲಿ ಕಾರು…

2 hours ago

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago