ಕರ್ನಾಟಕದ ವಾಹನಗಳ ಮೇಲೆ ಕಲ್ಲು ತೂರಾಟ ; ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ  – Vishwanews24

Featured, ರಾಷ್ಟ್ರ ನ್ಯೂಸ್

ಕರ್ನಾಟಕದ ವಾಹನಗಳ ಮೇಲೆ ಕಲ್ಲು ತೂರಾಟ ; ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ  – Vishwanews24

ಬೆಂಗಳೂರು: ಕರ್ನಾಟಕದ ವಾಹನಗಳ ಮೇಲೆ ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರು ಕಲ್ಲು ತೂರಾಟ, ಮಸಿ ಬಳಿಯುತ್ತಿರೋ ಪ್ರಕರಣ ಹೆಚ್ಚಾದ ಕಾರಣದಿಂದಾಗಿ, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಈ ಸಂಬಂಧ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸೋ ಮುನ್ಸೂಚನೆಯಿದ್ದು, ಇದರ ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರೋದಾಗಿ ತಿಳಿಸಿದೆ.

ಕೊಂಬಗುಡ್ಡೆ ವಾರ್ಡಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಉಮೇಶ್ ಕರ್ಕೆರಾ ಪರ ಹೆಚ್ಚಿದ ಒಲವು:vishwanews24

ರಾಯಚೂರು, ಬೆಳಗಾವಿ, ಕಲಬುರ್ಗಿ, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಗಳು ತೆರಳೋದು ನಿಲುಗಡೆಯಾಗಿದೆ. ಈ ಮೂಲಕ ಸಾರಿಗೆ ಬಸ್ ಗಳ ಮೇಲೆ ಎಂಇಎಸ್ ಪುಂಡರಿಂದ ಹಾನಿಯಾಗೋದನ್ನು ತಪ್ಪಿಸಲು ಈ ಕ್ರಮವನ್ನು ಸಾರಿಗೆ ನಿಗಮ ಅನುಸರಿಸಿದೆ.

ಇಂದು ಬೆಳಿಗ್ಗೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೈನಿಕರೊಬ್ಬರನ್ನು ಬಿಟ್ಟು ಬರಲು ತೆರಳಿದ್ದಂತ ಕಾರಿನ ಮೇಲೆ ಎಂಇಎಸ್ ಪುಂಡರು ಕಲ್ಲು ತೂರಾಟ ನಡೆಸಿದ್ದರು. ಕಾರಿನ ಗ್ಲಾಸ್ ಗಳನ್ನು ಪುಡಿ ಮಾಡಿ ದುಶ್ ಕೃತ್ಯವೆಸಗಿದ್ದರು. ಈ ಹಿನ್ನಲೆಯಲ್ಲಿ ಈಗ ಸಾರಿಗೆ ಬಸ್ ಸಂಚಾರ ಕೂಡ ಸ್ಥಗಿತಗೊಳಿಸಲಾಗಿದೆ.

ಕೊರೋನಾ ಲಸಿಕೆ ಪ್ರಮಾಣಪತ್ರದಲ್ಲಿ ಪಿಎಂ ಮೋದಿ ಪೋಟೋ ತೆಗೆಯುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌  – Vishwanews24