ಕರ್ನಾಟಕ ಕೇಸರಿಯಲ್ಲ, ವರ್ಣರಂಜಿತವಾಗಿ ಮುಂದುವರಿಯಲಿದೆ: ಪ್ರಕಾಶ್ ರೈ
ಕರ್ನಾಟಕ ಕೇಸರಿಯಾಗುವುದಿಲ್ಲ, ಆದರೆ, ವರ್ಣರಂಜಿತವಾಗಿ ಮುಂದುವರಿಯಲಿದೆ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ವಿಶ್ವಾಸಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಗ್ಗೆ ವ್ಯಂಗ್ಯವಾಡಿರುವ ಅವರು, ‘ಆರಂಭವಾಗುವುದಕ್ಕೂ ಮುನ್ನವೇ ಪಂದ್ಯ ಮುಕ್ತಾಯವಾಗಿದೆ. 56 ಅನ್ನು ಮರೆತುಬಿಡಿ, 55 ಗಂಟೆಗಳ ಕಾಲವೂ ಉಳಿಸಲಾಗಿಲ್ಲ ಎಂದು ರೈ ಟ್ವೀಟ್‌ನಲಿ ಹೇಳಿದ್ದಾರೆ.
ತಮಾಷೆಯನ್ನು ಬದಿಗಿಟ್ಟು ಹೇಳುವುದಾದರೆ, ಹೆಚ್ಚಿನ ರಾಜಕೀಯ ಕೆಸರೆರಚಾಟ ನೋಡಲು ಪ್ರಿಯ ನಾಗರಿಕರು ಸಿದ್ಧರಾಗಿರಿ. ನಾಗರಿಕರ ಪರವಾದ ನಿಲುವನ್ನು ಹಾಗೂ #justasking ಮುಂದುವರಿಸಲಿದ್ದೇನೆ’ ಎಂದು ಟ್ವೀಟ್‌ನಲ್ಲಿ ಪ್ರಕಾಶ್ ರೈ ಉಲ್ಲೇಖಿಸಿದ್ದಾರೆ.
