ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಪದಚ್ಯುತಿ – Vishwanews24

Featured, ದಕ್ಷಿಣ ಕನ್ನಡ

ಪದಚ್ಯುತಿಗೆ ಕಾರಣ ಏನೂಂತ ತಿಳಿದಿಲ್ಲ..

ಎರಡು ಬಾರಿ ಅಕಾಡೆಮಿಯ ಅಧ್ಯಕ್ಷನಾಗಿ ಅದನ್ನ ಯಶಸ್ವಿಯಾಗಿ ಮುನ್ನಡೆಸಿದ ತೃಪ್ತಿ ಇದೆ ..

ರಹೀಂ ಉಚ್ಚಿಲ್ ಪ್ರತಿಕ್ರಿಯೆ..

ಮಂಗಳೂರು,: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧೀನ ಕಾರ್ಯದರ್ಶಿ ನಿನ್ನೆ ಈ ಬಗ್ಗೆ ಆದೇಶ ಹೊರಡಿಸಿದ್ದು, ರಹೀಂ ಉಚ್ಚಿಲ್ ಅವರ ಪದಚ್ಯುತಿಗೆ ಕಾರಣ ತಿಳಿಸಿಲ್ಲ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಹೀಂ ಉಚ್ಚಿಲ ಅವರು, ಪದಚ್ಯುತಿಗೆ ಕಾರಣ ಏನೂಂತ ತಿಳಿದಿಲ್ಲ. ಆದೇಶ ಬಂದ ಬಳಿಕವಷ್ಟೇ ನನಗೆ ವಿಷಯ ತಿಳಿಯಿತು. ಪಕ್ಷ ನನಗೆ ಎರಡು ಬಾರಿ ಅಕಾಡೆಮಿಯ ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದೆ. ಅದನ್ನು ಯಶಸ್ವಿಯಾಗಿ ಮುನ್ನಡೆಸಿದ ತೃಪ್ತಿ ಇದೆ ಎಂದು ತಿಳಿಸಿದ್ದಾರೆ.

20-39 ವರ್ಷ ವಯಸ್ಸಿನವರಲ್ಲಿ ಪ್ರಿಡಯಾಬಿಟಿಕ್ಸ್‌ 11% ರಷ್ಟು ಆತಂಕ ಕಾರಿ ಏರಿಕೆ : ಮೆಡಲ್ ಹೆಲ್ತ್‌ಕೇರ್ ವರದಿ – Vishwanews24

Leave a Reply