ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣರರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಮಾಜಿ ಸಚಿವ ನಿನಯ್ ಕುಮಾರ್ ಸೊರಕೆ ಮತ್ತು ತಂಡ:vishwanews24

Featured, ಉಡುಪಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣರರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಮಾಜಿ ಸಚಿವ ನಿನಯ್ ಕುಮಾರ್ ಸೊರಕೆ ಮತ್ತು ತಂಡ:vishwanews24

ಕಾಪು: ೨೦೨೨ ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಕಾಪು ತಾಲೂಕಿನ ಮೂಳೂರು ಗ್ರಾಮದ ದೈವನರ್ತಕ ಗುಡ್ಡ ಪಾಣರ ಅವರ ಮನೆಗೆ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿ ಹಾರ-ತುರಾಯಿಗಳೊಂದಿಗೆ ಸನ್ಮಾನಿಸಿ ಗೌರವ ಸಲ್ಲಿಸಿ ಆರ್ಶಿವಾದ ಪಡೆದುಕೊಂಡರು.

ಸುಮಾರು ೪೮ ವರ್ಷಗಳಿಂದ ಕರಾವಳಿ ಭಾಗದಲ್ಲಿ ವಿವಿಧ ದೈವಗಳ ಸೇವೆ ಸಲ್ಲಿಸುತ್ತಿರುವ ಪಾಣರ ಇವರು ಕಳೆದ ೩೮ ವರ್ಷಗಳಿಂದ ಕಾಪು ಗುರು ಬ್ರಹ್ಮ ಮುರ್ಗೆಕಲ ದೈವಸ್ಥಾನದಲ್ಲಿ ಪಿಲಿಚಂಡಿ ದೈವಕ್ಕೆ “ಪಿಲಿಕೋಲ” ದ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.


ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಬೆಳಪು ದೇವಿಪ್ರಸಾದ್ ಶೆಟ್ಟಿ,ನವೀನ್ ಸುವರ್ಣ ಅಡ್ವೆ,ಪುರಸಭಾ ಸದಸ್ಯರು,ಉಸ್ಮಾನ್ ಕಾಪು,ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

Leave a Reply