ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ : ದಿನೇಶ್ ಗುಂಡುರಾವ್ – Vishwanews24
ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ ..
ಬೆಂಗಳೂರು: ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು ” ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ. ಯುಪಿಎ ಆಡಳಿತದ ಅಂತ್ಯಕ್ಕೆ ಭಾರತದ ಸಾಲ 63,583 ಕೋಟಿ ಇತ್ತು.ಆದರೆ ಮೋದಿಯವರು ಕೇವಲ 8 ವರ್ಷದಲ್ಲಿ ಸಾಲದ ಪ್ರಮಾಣ 1.40 ಲಕ್ಷ ಕೋಟಿಗೆ ಏರಿಸಿದ್ದಾರೆ.ಈ ಸಾಲ ಮಾಡಿರುವುದು ಯಾರ ಉದ್ಧಾರಕ್ಕೆ ಎಂದು ಪ್ರಶ್ನಿಸಿದ್ದಾರೆ.
3
ಮನ್ಮೋಹನ್ ಸಿಂಗ್ ಸರ್ಕಾರವಿದ್ದಾಗ ಜನರಿಗೆ ಗ್ಯಾಸ್ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ತೈಲಗಳ ಮೇಲೆ ಅತಿಕಡಿಮೆ ತೆರಿಗೆ ಹಾಗೂ ಅಬಕಾರಿ ಸುಂಕ ವಿಧಿಸಲಾಗುತಿತ್ತು.ಅಷ್ಟಾದರೂ ದೇಶದ ಸಾಲ 76 ಲಕ್ಷ ಕೋಟಿ ದಾಟಿರಲಿಲ್ಲ.
ಈ ಸರ್ಕಾರದಲ್ಲಿ ಬಹುತೇಕ ಸಬ್ಸಿಡಿಗಳು ರದ್ದಾಗಿವೆ. ತೈಲಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ವಿಧಿಸಲಾಗುತ್ತಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 4, 2023
ಸಾಲ ಮಾಡಿ ತುಪ್ಪ ತಿನ್ನುವಂತೆ ಮೋದಿ ಆಡಳಿತದಲ್ಲಿ ಗೊತ್ತು ಗುರಿಯಿಲ್ಲದೆ ಸಾಲ ಮಾಡಲಾಗಿದೆ.ಈ ಸಾಲದಲ್ಲಿ ತುಪ್ಪ ತಿನ್ನುತ್ತಿರುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಜಿಡಿಪಿ ಕುಸಿದಿದೆ.ಅಭಿವೃದ್ಧಿ ಶೂನ್ಯವಾಗಿದೆ.ಹಾಗಾದರೆ ಆ ಸಾಲ ಎಲ್ಲಿಗೆ ಖರ್ಚಾಗುತ್ತಿದೆ. ಪಿಎಂಕೇರ್ಸ್ ನಂತೆ ಯಾವುದಾದರೂ ಉಂಡೆನಾಮದ ಸ್ಕೀಮ್ಗೆ ಹಣ ಬಳಕೆಯಾಗುತ್ತಿದೆಯೆ ಎಂದು ಪ್ರಶ್ನಿಸಿದ್ದಾರೆ.
ಮನ್ಮೋಹನ್ ಸಿಂಗ್ ಸರ್ಕಾರವಿದ್ದಾಗ ಜನರಿಗೆ ಗ್ಯಾಸ್ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ತೈಲಗಳ ಮೇಲೆ ಅತಿಕಡಿಮೆ ತೆರಿಗೆ ಹಾಗೂ ಅಬಕಾರಿ ಸುಂಕ ವಿಧಿಸಲಾಗುತಿತ್ತು.ಅಷ್ಟಾದರೂ ದೇಶದ ಸಾಲ 76 ಲಕ್ಷ ಕೋಟಿ ದಾಟಿರಲಿಲ್ಲ.ಈ ಸರ್ಕಾರದಲ್ಲಿ ಬಹುತೇಕ ಸಬ್ಸಿಡಿಗಳು ರದ್ದಾಗಿವೆ. ತೈಲಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮೋದಿಯವರು ಕಾಂಗ್ರೆಸ್ ಮಾಡಿದ ಸಾಲ ತೀರಿಸುತ್ತಿದ್ದಾರೆ ಎಂದು ಬಿಜೆಪಿ ಭಕ್ತರು, ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಹರಡುತ್ತಿದ್ದಾರೆ. ವಾಸ್ತವವಾಗಿ 2014 ರವರೆಗೆ ಇದ್ದ ದೇಶದ ಒಟ್ಟು ಸಾಲದ ಮೊತ್ತವೇ 76 ಲಕ್ಷ ಕೋಟಿ.ಆದರೆ ಮೋದಿ 8 ವರ್ಷದಲ್ಲಿ 98 ಲಕ್ಷ ಕೋಟಿ ಹೆಚ್ಚವರಿ ಸಾಲ ಮಾಡಿದ್ದಾರೆ.ಹೀಗಿರುವಾಗ ಮೋದಿ ಯಾರ ಸಾಲ ತೀರಿಸುತ್ತಿದ್ದಾರೆ?
ಬೆಂಗಳೂರು ಯುವಕನ ಕಿಡ್ನಾಪ್, ಕೊಲೆ ಪ್ರಕರಣ; ಶವಕ್ಕಾಗಿ ಚಾರ್ಮಾಡಿ ಘಾಟ್ ನಲ್ಲಿ ಹುಡುಕಾಟ – Vishwanews24
ಮೋದಿ ಆಡಳಿತದಲ್ಲಿ ಆರ್ಥಿಕ ಶಿಸ್ತು ಹಳ್ಳ ಹಿಡಿದಿದೆ ಎಂಬುದಕ್ಕೆ ಈ ಸರ್ಕಾರ ಮಾಡಿರುವ ಸಾಲದ ಪ್ರಮಾಣವೇ ಸಾಕ್ಷಿ. ಮೋದಿಯವರು ಮಾಡಿರುವ ಸಾಲದ ಎಫೆಕ್ಟ್ ಹೇಗಿದೆಯೆಂದರೆ, ಅಸಲು ಹೋಗಲಿ, ಬಡ್ಡಿ ಕಟ್ಟಲು ಸಾಧ್ಯವಿಲ್ಲದಷ್ಟು ವಿಪರೀತವಾಗಿದೆ. ಇದು ದೇಶ ದಿವಾಳಿಯಾಗುತ್ತಿರುವ ಪ್ರಾಥಮಿಕ ಲಕ್ಷಣ. ಇನ್ನಾದರೂ ಬಿಜೆಪಿ ಭಕ್ತರು ಮೋದಿ ಭ್ರಮೆಯಿಂದ ಹೊರಬರಲಿ ಎಂದು ಹೇಳಿದ್ದಾರೆ
