ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸದಾನಂದ ಗೌಡರಿಗೆ ಅಫರ್‌ ನೀಡಿದ ಡಿಕೆಶಿ – Vishwanews24

Featured, ಉಡುಪಿ, ರಾಜ್ಯ ನ್ಯೂಸ್

ಉಡುಪಿ: ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸದಾನಂದ ಗೌಡರಿಗೆ ಅಫರ್‌ ನೀಡಿದ ಡಿಕೆಶಿ

ಉಡುಪಿ: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿಕೆ ಸದಾನಂದ ಗೌಡ ಅವರಿಗೆ ಅಚ್ಚರಿ ಎಂಬಂತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಆಫರ್ ನೀಡಿದ್ದಾರೆ.

ಹಾಲಿ ಸಂಸದ ಡಿವಿ ಸದಾನಂದಗೌಡ ಅವರನ್ನು ಬದಿಗೊತ್ತಿ ಬೆಂಗಳೂರು ಉತ್ತರ ಬಿಜೆಪಿ ಟಿಕೆಟ್ ಶೋಭಾ ಕರಂದ್ಲಾಂಜೆ ಅವರಿಗೆ ನೀಡಿದೆ. ಶೋಭಾ ಅವರು ಬೆಂಗಳೂರಿನ ಸದಾನಂದ ಗೌಡರನ್ನು ಅವರ ನಿವಾಸಕ್ಕೆ ಭೇಟಿ ಮಾಡಿ ಬೆಂಬಲ ಕೋರಿದರು.

420 ಇರೋರು 400 ಸೀಟು ಗೆಲ್ಲುವ ದುರಹಂಕಾರದ ಮಾತಾಡ್ತಾರೆ: ಮೋದಿ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ – Vishwanews24

ಈ ಬೆಳವಣಿಗೆಯ ಬೆನ್ನಲ್ಲೇ ಇದೀಗ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಡಿವಿ ಸದಾನಂದಗೌಡ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಆಫರ್ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಟಿಕೆಟ್ ಹಂಚಿಕೆ ಬಳಿಕ ಸ್ವಪಕ್ಷದ ಮೇಲೆ ಲಿಂಗಾಯತ, ಕುರುಬ ಸಮುದಾಯ ಬಂಡಾಯವೆದ್ದಿದೆ. ಈಗ ಡಿವಿ ಸದಾನಂದಗೌಡರು ಕೂಡ ಬಂಡಾಯವೆದ್ದರೆ ರಾಜ್ಯದ ಪ್ರಮುಖ ಸಮುದಾಯವೊಂದರ ಬಂಡಾಯವನ್ನು ಬಿಜೆಪಿ ಎದುರಿಸಬೇಕಿದೆ. ಇದನ್ನೇ ಎನ್‌ಕ್ಯಾಚ್ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಸದಾನಂದ ಗೌಡರನ್ನು ಪಕ್ಷಕ್ಕೆ ಎಳೆದು ತರುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ. ಡಿ.ವಿ ಸದಾನಂದ ಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಒಕ್ಕಲಿಗ ಮತಗಳನ್ನು ಪಕ್ಷಕ್ಕೆ ಸೆಳೆಯಬಹುದು ಎಂಬುದು ಡಿಕೆ ಶಿವಕುಮಾರ್ ಲೆಕ್ಕಾಚಾರ. ಟಿಕೆಟ್ ಘೋಷಿಸದ ಬೆಂಗಳೂರು ಉತ್ತರ, ಮೈಸೂರು, ದಕ್ಷಿಣ ಕನ್ನಡ ಈ ಮೂರರಲ್ಲಿ ಯಾವುದಾರು ಕ್ಷೇತ್ರದಿಂದ ಡಿ.ವಿ ಸದಾನಂದ ಗೌಡ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ ಕಾಂಗ್ರೆಸ್. ಈ ಬಗ್ಗೆ ಅವರಿಗೆ ಆಫರ್ ನೀಡಲಾಗಿದೆ. ಹೀಗಾಗಿ ಇಷ್ಟು ವರ್ಷ ಎಲ್ಲವನ್ನೂ ಕೊಟ್ಟಿರುವ ಪಕ್ಷವನ್ನು ಬಿಟ್ಟು ಡಿ.ವಿ ಸದಾನಂದ ಗೌಡ ಕೈ ಹಿಡಿತಾರಾ ಎಂಬುದನ್ನು ಕಾದುನೋಡಬೇಕಿದೆ.

ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ಅಕ್ರಮ ರೆಸಾರ್ಟ್ ನಿರ್ಮಾಣ ಆರೋಪ – Vishwanews24

Leave a Reply