ಕಾಂಗ್ರೆಸ್ಗೆ ಅವಕಾಶ ಕೊಡಿ ,ರಾಮಮಂದಿರ ಕಟ್ಟಿಸುತ್ತೇವೆ: ಸಿ.ಎಂ ಇಬ್ರಾಹಿಂ – Vishwanews24
ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಡೆದ ಕಾಂಗ್ರೆಸ್ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, 45 ವರ್ಷಗಳ ಇತಿಹಾಸದಲ್ಲಿಯೇ ಈಗಿರುವಷ್ಟು ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆ ಎಂದೂ ಇರಲಿಲ್ಲ.
ಮೋದಿಯವರು ಮುಸ್ಲಿಂ ಮಹಿಳೆಯರ ಬಗ್ಗೆ ಅನುಕಂಪ ತೋರಿಸಿ ತ್ರಿವಳಿ ತಲಾಖ್ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರಿಗೆ ಸಂಸಾರದ ಬಗ್ಗೆ ತಿಳಿದಿಲ್ಲ. ಆಮಂತ್ರಣವಿಲ್ಲದೆ ಪಾಕಿಸ್ತಾನಕ್ಕೆ ಹೋಗುವವರ ವ್ಯಕ್ತಿತ್ವವು ನಾಶವಾಗುತ್ತದೆ ಎಂಬ ಮಾತು ಸಂಸ್ಕೃತಲ್ಲಿದೆ. ಹಾಗಾಗಿ ನವಾಜ್ ಶರೀಫ್ ಕಾಲದಲ್ಲಿ ಮೋದಿ ಅವರ ಮೊಮ್ಮಗಳ ಮದುವೆಗೆ ಹೋಗಿ ತಮ್ಮ ವ್ಯಕ್ತತ್ವವನ್ನೇ ನಾಶ ಮಾಡಿಕೊಂಡರು.
ಬಿಜೆಪಿ ಆಡಳಿತಕ್ಕೆ ಬಂದರೆ ರಾಮಮಂದಿರ ಕಟ್ಟಿಸುತ್ತೇವೆ ಎಂದು ಹೇಳಿದ್ದರು. ಆದರೆ ಈವರೆಗೆ ರಾಮಮಂದಿರ ನಿರ್ಮಾಣವಾಗಿಲ್ಲ. ಕಾಂಗ್ರೆಸ್ಗೆ ಕೇಂದ್ರದಲ್ಲಿ ಅವಕಾಶ ಕೊಡಿ ಖಂಡಿತಾ ರಾಮಮಂದಿರ ಕಟ್ಟಿಸುತ್ತೇವೆ. ಹಿಂದೂ -ಮುಸ್ಲಿಂ ಸಾಮರಸ್ಯದಿಂದ ರಾಮಮಂದಿರವನ್ನು ಕಟ್ಟಿಸುತ್ತೇವೆ ಎಂದರು.
