ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಆರ್‌ಪಿಎನ್‌ ಸಿಂಗ್‌ – Vishwanews24

Featured, ರಾಷ್ಟ್ರ ನ್ಯೂಸ್

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಆರ್‌ಪಿಎನ್‌ ಸಿಂಗ್‌ – Vishwanews24

ಲಕ್ನೋ: ಕೇಂದ್ರದ ಮಾಜಿ ಸಚಿವ, ಈ ಬಾರಿ ಚುನಾವಣೆಯ ತಾರಾ ಪ್ರಚಾರಕರಾಗಿದ್ದ ಆರ್‌ಪಿನ್‌ ಸಿಂಗ್‌ ಇಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ.

ಸಿಂಗ್‌ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಮ್ಮ ಭದ್ರಕೋಟೆಯಾದ ಪದ್ರೌನಾದಿಂದ ಯುಪಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಬಿಜೆಪಿ ಸೇರಿದ ಸಿಂಗ್‌, ಕಳೆದ 32 ವರ್ಷಗಳಿಂದ ಒಂದೇ ಪಕ್ಷದಲ್ಲಿ ಇದ್ದೆ. ಆದರೆ ಈಗ ಆ ಪಕ್ಷ (ಕಾಂಗ್ರೆಸ್) ಮೊದಲಿನಂತಿಲ್ಲ.‌ ಈಗ ಎಲ್ಲರಿಗೂ ತಿಳಿದಿರುವಂತೆ ಬಿಜೆಪಿ ಜನಹಿತಕ್ಕಾಗಿ ದುಡಿಯುತ್ತಿದೆ. ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ ಸೋಮವಾರ ಘೋಷಿಸಿದ್ದ ತಾರಾ ಪ್ರಚಾರಕರ ಪಟ್ಟಿಯಲ್ಲಿ ಆರ್‌ಪಿಎನ್‌ ಸಿಂಗ್‌ ಕೂಡ ಸ್ಥಾನ ಪಡೆದುಕೊಂಡಿದ್ದರು. ಆದರೆ ಅವರು ಪಕ್ಷದ ವಿಚಾರವಾಗಿ ಅಸಮಾಧಾನ ಹೊಂದಿದ್ದರು. ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಪ್ರಚಾರದಿಂದ ದೂರ ಉಳಿದಿದ್ದರು.

ಹಿಜಾಬ್‌ ವಿವಾದ : ಪೋಷಕರು ಮತ್ತು ಶಿಕ್ಷಣ ಸಂಸ್ಥೆ ಕುಳಿತು ಬಗೆಹರಿಸಿಕೊಳ್ಳಬೇಕು : ಯು.ಟಿ ಖಾದರ್‌ – VIshwanews24

Leave a Reply