Featured

ಕಾಂಗ್ರೆಸ್ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ: ಕುಯಿಲಾಡಿ ಸುರೇಶ್ ನಾಯಕ್

ಕಾಂಗ್ರೆಸ್ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಸದಾ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡು ದೇಶ, ಧರ್ಮವನ್ನು ಒಡೆಯುವ ಕೀಳು ರಾಜಕೀಯದಲ್ಲಿ ನಿರತವಾಗಿರುವ ಕಾಂಗ್ರೆಸ್ ತನ್ನ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ದಾಖಲೆಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಸದಾ ಅಪಪ್ರಚಾರ ಮತ್ತು ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ದೇಶದ ಏಕತೆಗೆ ಧಕ್ಕೆ ತರುವಂತಹ ಹೀನ ಕೃತ್ಯದಲ್ಲಿ ತೊಡಗಿರುವುದು ಶೋಚನೀಯ. ಒಂದೇ ಕುಟುಂಬದ ಉದ್ಧಾರ ಮತ್ತು ಗುಲಾಮಗಿರಿ ಸಂಸ್ಕೃತಿಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ನಾಯಕರು ಅಪಪ್ರಚಾರವನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡಿರುವುದು ವಿಷಾದನೀಯ.

ಸ್ವಾತಂತ್ರ್ಯಾ ನಂತರ ಸುದೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿ, ಬಡತನ ನಿವಾರಣೆಯನ್ನು ಕೇವಲ ಘೋಷಣೆಗಷ್ಟೇ ಸೀಮಿತಗೊಳಿಸಿರುವುದು ಇತಿಹಾಸ. ಸಾವಿರಾರು ಹಳ್ಳಿಗಳ ವಿಧ್ಯುದ್ಧೀಕರಣ, ಉಚಿತ ಗ್ಯಾಸ್ ವಿತರಣೆ, ಜನ್ ಧನ್ ಖಾತೆ, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಮುಂತಾದ ನೂರಾರು ಜನಪರ ಯೋಜನೆಗಳ ಸಹಿತ ಉಚಿತ ಕೋವಿಡ್ ಲಸಿಕೆ ವಿತರಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಡವರ ಕಣ್ಣೀರೊರೆಸುವ ಕಾಯಕದಲ್ಲಿ ನಿರತವಾಗಿದೆ. ಕಾಂಗ್ರೆಸ್ ಮಾತ್ರ
ದೇಶ ವಿರೋಧಿ ಟೂಲ್ ಕಿಟ್ ನಂತಹ ತುಚ್ಛ ಅಭಿಯಾನದಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸೇವಾ ಹೀ ಸಂಘಟನ್ ತತ್ವದಡಿ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ನಿರಂತರ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರೆ, ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳ ವಿರುದ್ದ ಕೀಳು ಅಪಪ್ರಚಾರ ಅಭಿಯಾನದಲ್ಲಿ ನಿರತವಾಗಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ. ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ತನ್ನ ಆಡಳಿತಾವಧಿಯ 2014ರ ಮೊದಲು ಪೆಟ್ರೋಲ್ ಬೆಲೆ ಯಾವ ಮಟ್ಟದಲ್ಲಿ ಏರಿಕೆಯಾಗುತ್ತಲೇ ಬಂದಿದೆ ಎಂಬ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳುವುದರ ಜೊತೆಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಯನ್ನು ಇಳಿಸಿ ಮಾದರಿಯಾಗುವುದು ಉತ್ತಮ.

ದೇಶದ ಅಖಂಡತೆ ಮತ್ತು ಏಕತೆಗೆ ಒತ್ತು ನೀಡುವ ಜೊತೆಗೆ ಅಭಿವೃದ್ಧಿ ಪರ ಆಡಳಿತ ಬಿಜೆಪಿಯ ಮೂಲ ಮಂತ್ರ. ಈ ನೀತಿಗೆ ವಿರುದ್ಧವಾಗಿರುವ ಕಾಂಗ್ರೆಸ್ ಸ್ಥಿತಿ ದೇಶದ ವಿವಿಧ ರಾಜ್ಯಗಳಲ್ಲಿ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದು ಜಗಜ್ಜಾಹೀರಾಗಿದೆ. ಆದರೂ ಪ್ರಧಾನಿ ಮೋದಿ ವಿರೋಧಿ ಮಾನಸಿಕತೆಯಿಂದ ಕಾಂಗ್ರೆಸ್ ದೇಶ ವಿರೋಧಿ ಮನಸ್ಥಿತಿಯತ್ತ ಹೊರಳಿರುವುದು ಮಾತ್ರ ಶೋಚನೀಯ. ಈ ಎಲ್ಲ ವಿದ್ಯಮಾನಗಳನ್ನು ಜನತೆ ಕೂಲಂಕುಷವಾಗಿ ಗಮನಿಸುತ್ತಿದ್ದು ದೇಶ ವಿರೋಧಿ ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ – vishwanews24

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…

1 day ago

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ – vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…

1 day ago

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ – vishwanews24

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…

1 day ago

ಉಡುಪಿ : ವ್ಯಕ್ತಿ ನಾಪತ್ತೆ – vishwanews24

ಉಡುಪಿ : ವ್ಯಕ್ತಿ ನಾಪತ್ತೆ      ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…

2 days ago

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ – vishwanews24

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…

2 days ago

ಉಡುಪಿ : ಜು. 10 ರಂದು ನೇರ ಸಂದರ್ಶನ – vishwanews24

ಉಡುಪಿ : ಜು. 10 ರಂದು ನೇರ ಸಂದರ್ಶನ      ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…

2 days ago