ಕಾಂಗ್ರೆಸ್ ಗೂಂಡಾಗಳ ನಡುವೆ ನುಗ್ಗಿ ನೆನ್ನೆ ನಡೆದ ಬಂದ್ ಗೆ ವಿರೋಧ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ರವರ ಈ ಸಾಹಸಕ್ಕೆ ಬೇಶ್ ಎಂದ ರಕ್ಷಣಾ ಸಚಿವೆ..

Featured, ಉಡುಪಿ, ರಾಷ್ಟ್ರ ನ್ಯೂಸ್

ನೆನ್ನೆ ಉಡುಪಿಯಲ್ಲಿ ನಡೆದ ಬಂದ್ ಸಂದರ್ಭ ವಿಡಿಯೋಗಳು  ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದರಲ್ಲಿ ಒಂದು ಬಲವಂತವಾಗಿ ಬಂದ್ ನಡೆಸುತ್ತಿದ್ದ ಸುಮಾರು ಇನ್ನೂರರಷ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತನ್ನ ಒಬ್ಬ ಸ್ನೇಹಿತನ ಜೊತೆಗೂಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕಿದ  ಧೀರ ಹೆಣ್ಣುಮಗಳ ವಿಡಿಯೋ..

ಚೈತ್ರಾ ಕುಂದಾಪುರ ಎಂಬ ಎಂಬ ಯುವತಿ ಉಡುಪಿಯ ಕಡಿಯಾಳಿ ಎಂಬಲ್ಲಿ ತಿಂಡಿ ತಿನ್ನಲು ಹೋಟೆಲ್ ಒಂದಕ್ಕೆ ತೆರಳಿದ್ದರು ಆ ಸಂದರ್ಭ ಅಲ್ಲಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು ತಿಂಡಿ ತಿನ್ನುತ್ತಿದ್ದವರನ್ನು ಬಲವಂತವಾಗಿ ಹೊರದೂಡಿ ಹೋಟೆಲ್ ಶಟರ್ ಅನ್ನು ಮುಚ್ಚಿದ್ದರು. ಹೀಗೆ 200 ರ ಅಸುಪಾಸಿನಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರ ನಡುವಿಗೆ ಬಂದ ಚೈತ್ರಾ ಕುಂದಾಪುರ ಏಕಾಏಕಿ ಮೋದಿಯವರಿಗೆ ಜೈಕಾರ ಹಾಕಲು ಆರಂಭಿಸಿದ್ದರು. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಸ್ವಲ್ಪ ಸಮಯ ಕಕ್ಕಾಬಿಕ್ಕಿಯಾಗಿ ಬಳಿಕ ತಾವೂ ಕಾಂಗ್ರೆಸ್ ಗೆ ಜೈಕಾರ ಹಾಕಲು ಆರಂಭಿಸಿದರು. ಈ ಸಂದರ್ಭ ತಳ್ಳಾಟಗಳು ನಡೆದು ಚೈತ್ರಾ ಕುಂದಾಪುರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಉಡುಪಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೈತ್ರಾರ ಧೈರ್ಯವನ್ನು ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸಹ ಕೊಂಡಾಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ ವಿಡಿಯೋವನ್ನು ಶೇರ್ ಮಾಡಿರುವ ರಕ್ಷಣಾ ಸಚಿವೆ “ಈ ಯುವತಿ ಭಾರತ್ ಬಂದ್ ಸಂದರ್ಭ ತೋರಿರುವ ಧೈರ್ಯ ಹಾಗೂ ಮೋದಿ ಸರಕಾರದ ಮೇಲೆ ಇಟ್ಟಿರುವ ನಂಬಿಕೆ ಗಮನಾರ್ಹವಾಗಿದೆ. ದೇಶದ ಇತರ ಪ್ರದೇಶಗಳಲ್ಲಿಯೂ ಸಹ ಜನರು ಭಾರತ್ ಬಂದ್ ಅನ್ನು ತಿರಸ್ಕರಿಸಲು ಹೊರಬಂದಿದ್ದು ಕಾಂಗ್ರೆಸ್ ನ ಬೂಟಾಟಿಕೆಯನ್ನು ಬಹಿರಂಗವಾಗಿ ತಿರಸ್ಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

 

 

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್!

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಎಂಬವರ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ. ಬಂದ್ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದ ಚೈತ್ರಾ ಕುಂದಾಪುರ ಹಾಗೂ ತಂಡದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದ ಪ್ರಕರಣ ಇದೀಗ ರಾಷ್ಟ್ರವ್ಯಾಪಿ ಚರ್ಚೆ ನಡೆಯುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಉಡುಪಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .