Featured

ಕಾಂಗ್ರೆಸ್ ತೊರೆಯುವುದು ನಿಶ್ಚಿತ ಆದರೆ, ಬಿಜೆಪಿ ಸೇರುವುದಿಲ್ಲ : ಅಮರೀಂದರ್ ಸಿಂಗ್ -Vishwanews24

ಕಾಂಗ್ರೆಸ್ ತೊರೆಯುವುದು ನಿಶ್ಚಿತ ಆದರೆ, ಬಿಜೆಪಿ ಸೇರುವುದಿಲ್ಲ : ಅಮರೀಂದರ್ ಸಿಂಗ್ -Vishwanews24

ನವದೆಹಲಿ: ಕಾಂಗ್ರೆಸ್ ತೊರೆಯುವುದು ನಿಶ್ಚಿತ ಆದರೆ, ಬಿಜೆಪಿ ಸೇರುವುದಿಲ್ಲ ಎಂದು ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗುರುವಾರ ಹೇಳಿದ್ದಾರೆ. ಈವರೆಗೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಆದರೆ ಕಾಂಗ್ರೆಸ್ ನಲ್ಲಿಯೇ ಉಳಿಯುವುದಿಲ್ಲ, ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಎನ್ ಡಿಟಿವಿಗೆ ನೀಡಿದ  ಸಂದರ್ಶನದಲ್ಲಿ ಅಮರೀಂದರ್ ಸಿಂಗ್ ಹೇಳಿದ್ದಾರೆ. ಇದಾದ ಬಳಿಕ ತನ್ನ ಟ್ವಿಟರ್ ಖಾತೆಯಿಂದ ಕಾಂಗ್ರೆಸ್ ಪದವನ್ನು ಕಿತ್ತು ಹಾಕಿದ್ದಾರೆ.

ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂದು ಊಹಿಸಿರುವ ಮಾಜಿ ಮುಖ್ಯಮಂತ್ರಿ, ನವಜೀತ್ ಸಿಂಗ್ ಸಿಧುವನ್ನು ಬಾಲಿಶ: ವ್ಯಕ್ತಿ ಎಂದು ಕರೆದಿದ್ದಾರೆ. 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನಗೆ ನನ್ನದೇ ಆದ ಸಿದ್ದಾಂತಗಳು, ನಂಬಿಕೆಗಳಿವೆ. ಅದೇ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಬೆಳಗ್ಗೆ 10-30ರ ಸುಮಾರಿನಲ್ಲಿ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ಕೇಳುತ್ತಾರೆ. ಯಾವುದೇ ಪ್ರಶ್ನೆಗಳನ್ನು ನನ್ನ ಎತ್ತಲಿಲ್ಲ. ಈಗಲೇ ರಾಜೀನಾಮೆ ಕೊಡುವುದಾಗಿ ಹೇಳಿ, 4 ಗಂಟೆಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದೇನೆ. 50 ವರ್ಷಗಳ ನಂತರ ನನ್ನ ಮೇಲೆ ಅಪನಂಬಿಕೆ, ವಿಶ್ವಾಸವಿಲ್ಲದಂತಹ ಪಕ್ಷದಲ್ಲಿ ಯಾವ ಅರ್ಥದಲ್ಲಿ ಇರಲಿ ಎಂದು ಅವರು ಪ್ರಶ್ನಿಸಿದರು.

ಈ ರೀತಿಯಲ್ಲಿ ನನನ್ನು ನೋಡಿಕೊಳ್ಳಲಾಗುತ್ತದೆ ಎಂಬುದನ್ನು ಊಹಿಸಿರಲಿಲ್ಲ. ಈವರೆಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಆದರೆ, ನಂಬಿಕೆ ಇಲ್ಲದ ಪಕ್ಷದಲ್ಲಿ ಹೇಗೆ ಮುಂದುವರೆಯಲು ಸಾಧ್ಯ, ಎಲ್ಲಿ ನಂಬಿಕೆ ಇರುವುದಿಲ್ಲವೋ ಅಲ್ಲಿ ಯಾರು ಕೂಡಾ ಮುಂದುವರೆಯಬಾರದು ಎಂದರು. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಇದರಲ್ಲಿ ಎರಡು ಮಾತಿಲ್ಲ, ಆದರೆ, ಬಿಜೆಪಿ ಸೇರುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.\

ಇದನ್ನೂ ಓದಿ : ಬೆಂಗಳೂರಿಗೆ ರಾಜ್ಯದ ಮೊದಲ ಎಲೆಕ್ಟ್ರಿಕ್ ಬಸ್ -Vishwanews24

ಸಿಧು ಬಾಲಿಶ: ವ್ಯಕ್ತಿ. ಅವರಿಗೆ ಸ್ಥಿರತೆ ಇಲ್ಲ, ಅವರ ತಂಡದ ಆಟಗಾರರಲ್ಲ, ಅವರು ಏಕಾಂಗಿ. ಅವರು ಕಾಂಗ್ರೆಸ್ ಮುಖ್ಯಸ್ಥರಾಗಿ ನಿರ್ವಹಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಸನ್ನಿವೇಶ ಸೃಷ್ಟಿಸುವುದರಲ್ಲಿ ಅವರು ನಿಸ್ಸೀಮರು, ಕಫಿಲ್ ಶರ್ಮಾ ಶೋನಲ್ಲಿ ಎನು ಮಾಡುತ್ತಾರೋ ಅದನ್ನು ಮಾಡುತ್ತಾರೆ. ಆದರೆ, ಅವರು ಗಂಭೀರ ವ್ಯಕ್ತಿತ್ವ ಹೊಂದಿಲ್ಲ. ಗಂಭೀರತೆ ಇಲ್ಲದ ವ್ಯಕ್ತಿ ಪಕ್ಷ ಹಾಗೂ ರಾಜ್ಯ ಸರ್ಕಾರದಲ್ಲಿ  ಉತ್ತಮ ನಿರ್ಣಯ ಕೈಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಪಕ್ಷಕ್ಕೆ ಯುವಕರು ಸೆಳೆಯುಲು ಬಯಸುತ್ತಿದ್ದಾರೆ. ಆದರೆ, ಹಿರಿಯ ಮುಖಂಡರ ಸಲಹೆಗಳನ್ನು ಅವರು ಪರಿಗಣಿಸುತ್ತಿಲ್ಲ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಂಜಾಬ್ ನಲ್ಲಿ ನೆಲಕಚ್ಚಲಿದೆ ಎಂದು ಅವರು ಊಹಿಸಿದ್ದಾರೆ.

ಇದನ್ನೂ ಓದಿ : ಪ್ರತಿ ಜಿಲ್ಲೆಯಲ್ಲಿಯೂ ಒಂದು ವೈದ್ಯಕೀಯ ಕಾಲೇಜು : ಪ್ರಧಾನಿ ಮೋದಿ -Vishwanews24

Vishwa News 24

Recent Posts

ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ  – vishwanews24

ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ  ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ  ಜಿಲ್ಲೆಯ ಚಿಂಚಿನಾಡ…

20 hours ago

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ – vishwanews24

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ ಕರಾವಳಿ ಭಾಗದಲ್ಲಿ ಕರ್ನಾಟಕ…

21 hours ago

ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ – vishwanews24

ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ ಬೆಂಗಳೂರು: ಬಿಟ್ ಕಾಯಿನ್…

21 hours ago

ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು – vishwanews24

ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರು:ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ…

22 hours ago

ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ : ಸಿಎಂ ಡಿ.ಕೆ. ಶಿ – vishwanews24

ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ .. ನಾಗೇಂದ್ರ ಅವರ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ…

22 hours ago

ಕಟೀಲು  ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ – vishwanews24

ಕಟೀಲು  ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ ಮಂಗಳೂರು : ಶ್ರೀ ಕ್ಷೇತ್ರ ಕಟೀಲು…

22 hours ago