ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿರುವ 14 ಶಾಸಕರನ್ನು ಕ್ಷೇತ್ರದ ಜನರೂ ಕೂಡ ತಿರಸ್ಕರಿಸುತ್ತಾರೆ : ದಿನೇಶ್ ಗುಂಡೂರಾವ್ -Vishwanews24
ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿರುವ 14 ಶಾಸಕರನ್ನು ಕ್ಷೇತ್ರದ ಜನರೂ ಕೂಡ ತಿರಸ್ಕರಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ 14 ಶಾಸಕರನ್ನು ಉಚ್ಛಾಟಿಸಿರುವ ಎಐಸಿಸಿ ನಿರ್ಧಾರವನ್ನು ದಿನೇಶ್ ಗುಂಡೂರಾವ್ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 14 ದ್ರೋಹಿಗಳನ್ನು ಕಾಂಗ್ರೆಸ್ ನಿಂದ ಹೊರ ಹಾಕಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸ್ಥಾನವಿಲ್ಲ ಮತ್ತು ಪ್ರಸ್ತುತ ಸ್ಥಾನದಲ್ಲಿ ಬಿಜೆಪಿಯೂ ಅವರನ್ನು ಬಯಸುತ್ತದೆಯೇ ಎಂದು ನಾನು ಆಶ್ಚರ್ಯದಿಂದ ಗಮನಿಸುತ್ತಿದ್ದೇನೆ ಎಂದಿದ್ದಾರೆ.
ಇನ್ನು ಉಚ್ಛಾಟಿತ 14 ಶಾಸಕರನ್ನು ಅವರ ಕ್ಷೇತ್ರದ ಜನರೂ ಕೂಡ ತಿರಸ್ಕರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಟ್ವೀಟರ್ ನಲ್ಲಿ ಅತೃಪ್ತ ಶಾಸಕರ ವಿರುದ್ಧ ಗರಂ ಆಗಿದ್ದಾರೆ.
