ಕಾಂಗ್ರೆಸ್ ಪ್ರತಿಭಟನೆಯ ಬೆನ್ನಲ್ಲೆ ರದ್ದುಗೊಂಡ ಕಂಚಿನಡ್ಕ ಟೋಲ್ ಗೇಟ್ :vishwanews24

Featured, ಉಡುಪಿ

ಕಾಂಗ್ರೆಸ್ ಪ್ರತಿಭಟನೆಯ ಬೆನ್ನಲ್ಲೆ ರದ್ದುಗೊಂಡ ಕಂಚಿನಡ್ಕ ಟೋಲ್ ಗೇಟ್ :vishwanews24

ವಿನಯ್ ಕುಮಾರ್ ಸೊರಕೆಯ ನೇತೃತ್ವದ ನಿಯೋಗಕ್ಕೆ ಸಂದ ಮೊದಲ ಹಂತದ ಜಯ

ಪಡುಬಿದ್ರಿ : ಪಡುಬಿದ್ರಿ: ಪಡುಬಿದ್ರಿ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್) ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕ ಪ್ರದೇಶದಲ್ಲಿ ಸ್ಥಾಪಿಸಲು ದ್ದೇಶಿಸಿರುವ ಟೋಲ್ ಗೇಟ್ ರದ್ದತಿಗೆ ಆಗ್ರಹಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಗೆ ಮೊದಲ ಹಂತದ ಜಯ ಲಬಿಸಿದೆ.

ಪ್ರತಿಭಟನೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಿಯೋಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಟೋಲ್ ರದ್ದತಿಯ ವಿಚಾರದಲ್ಲಿ ಮನವರಿಕೆ ಮಾಡಿದ ಪರಿಣಾಮವಾಗಿ ಮೊದಲ ಹಂತ ಜಯ ಸಿಕ್ಕಿದೆ

ನಿಯೋಗದ ಜೊತೆ ಮಾತನಾಡಿದ ಸಚಿವ ಜಾರಕಿಹೊಳಿ ಕಾರ್ಕಳದಿಂದ ಪಡುಬಿದ್ರಿ ಗೆ ಸಾಗುವ ರಸ್ತೆಯಲ್ಲಿ ಕಂಚಿನರ್ಕ ಭಾಗದಲ್ಲಿ ನಿರ್ಮಾಣವಾಗುವ ರದ್ದು ಮಾಡುವುದಾಗಿ ಭರವಸೆ ನೀಡಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಸಂಬಂಧಪಟ್ಟ ಇಲಾಖೆಯಿಂದ ಆರ್ಡರ್ ಪಾಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಟೋಲ್ ನಿರ್ಮಾಣವಾಗುವ ಸ್ಥಳದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿತ್ತು .ಪ್ರತಿಭಟನೆಯಲ್ಲಿ ಐನೂರಕ್ಕೂ ಅಧಿಕ ಕಾರ್ಯಕರ್ತರು ಸಾರ್ವಜನಿಕರು ಭಾಗಿಯಾಗಿದ್ದರು.

Leave a Reply