ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತ- ಶ್ರೀಶೈಲಪ್ಪ ಬಿದರೂರು ಇನ್ನಿಲ್ಲ – Vishwanews24

Featured, ರಾಜ್ಯ ನ್ಯೂಸ್

ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತ- ಶ್ರೀಶೈಲಪ್ಪ ಬಿದರೂರು ಇನ್ನಿಲ್ಲ

ಬೆಂಗಳೂರು: ಬೀದರ್ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಖಾಸಗಿ ರೆಸಾರ್ಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಯುವಾಗಲೇ ಶ್ರೀಶೈಲಪ್ಪ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು

ಸಭೆ ಆರಂಭವಾಗುತ್ತಿದ್ದಂತೆ ಕುಸಿದು ಬಿದ್ದು ಶ್ರೀಶೈಲಪ್ಪ ವಾಂತಿ ಮಾಡಿಕೊಂಡಿದ್ದರು. ಕಾರಿನಿಂದ ಇಳಿದು ಒಳಗೆ ಹೋಗುವಾಗಲೇ ಶ್ರೀಶೈಲಪ್ಪ ಸುಸ್ತಾಗಿದ್ದರು. ಬೆಳಿಗ್ಗೆ ತಿಂಡಿ ತಿನ್ನದೇ ಶ್ರೀಶೈಲಪ್ಪ ಬಿದರೂರು ಸಭೆಗೆ ಆಗಮಿಸಿದ್ದರು ಎನ್ನಲಾಗುತ್ತಿದೆ.

ಇಂದು ಆಯೋಜನೆಯಾಗಿದ್ದ ಕಾಂಗ್ರೆಸ್‌ ಸಭೆಯನ್ನು ರದ್ದು ಮಾಡಲಾಗಿದ್ದು, ರೆಸಾರ್ಟ್‌ನಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.

💥 ಬಾಂಬ್ ಸ್ಪೋಟದಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕನ ಚಿಕಿತ್ಸೆ ವೆಚ್ಚ ಜನಪ್ರತಿನಿಧಿಗಳು ಸೇರಿ ಬಿಜೆಪಿ ಭರಿಸಲಿದೆ : ಸಚಿವ ಸುನಿಲ್ ಕುಮಾರ್ – Vishwanews24

Leave a Reply