ಕಾಂಗ್ರೆಸ್ ಸರ್ಕಾರದಲ್ಲಿ ಯಾರನ್ನು ಯಾವಾಗ ಏನ್ ಬೇಕಾದ್ರು ಮಾಡ್ತಾರೆ: ಹೆಚ್‌ಡಿಕೆ ವಾಗ್ದಾಳಿ- vishwanews24

Featured, ರಾಜ್ಯ ನ್ಯೂಸ್

ಕಾಂಗ್ರೆಸ್ ಸರ್ಕಾರದಲ್ಲಿ ಯಾರನ್ನು ಯಾವಾಗ ಏನ್ ಬೇಕಾದ್ರು ಮಾಡ್ತಾರೆ: ಹೆಚ್‌ಡಿಕೆ

ಬೆಂಗಳೂರು: ಐಶ್ವರ್ಯ ಗೌಡ ಕೇಸ್‌ನಲ್ಲಿ ನಿಖಿಲ್, ಅನಿತಾ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಆಗುತ್ತಿರುವ ವಿಚಾರಕ್ಕೆ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಕೇಸ್ ನಡೆಯುತ್ತಿದೆ. ನಿಖಿಲ್, ಅನಿತಾ ಕುಮಾರಸ್ವಾಮಿ ಪರಿಚಯ ಅಂತ ಹೇಳಿ ನಿನ್ನೆ ಮೊನ್ನೆಯಿಂದ ಸುದ್ದಿ ಬರುತ್ತಿದೆ. ಐಶ್ವರ್ಯ ಗೌಡ ನಿಖಿಲ್, ಅನಿತಾ ಅವರನ್ನ ಯಾವಾಗ ಭೇಟಿ ಮಾಡಿದ್ರು? ಈ ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ ಅನ್ನೋದು ಗೊತ್ತಿದೆ. ಮಾಧ್ಯಮಗಳಲ್ಲಿ ಬಂದ ಮೇಲೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಹಿನ್ನೆಲೆ ತಿಳಿದಿಕೊಂಡಿದ್ದೇನೆ ಎಂದರು.

ಗೌತಮ್ ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆ ನಡೆಸುವಂತೆ ನ್ಯೂಯಾರ್ಕ್ ಕೋರ್ಟ್ ಆದೇಶ – vishwanews24

2016ರಲ್ಲಿ ದೂರು ಕೊಟ್ಟಿರೋದು, ವ್ಯವಹಾರ ನಡೆದಿರೋದು. ನಿಖಿಲ್, ಅನಿತಾ ಹೆಸರನ್ನು ಇದರಲ್ಲಿ ಎಳೆದಿದ್ದಾರೆ ಅಂತ ಮಾಹಿತಿ ತರಿಸಿದ್ದೇನೆ. ಈ ಸರ್ಕಾರ ಯಾರನ್ನು, ಯಾವಾಗ, ಏನು ಬೇಕಾದ್ರು ಮಾಡುತ್ತಾರೆ. ಸರ್ಕಾರದಲ್ಲಿ ಅಧಿಕಾರ ವರ್ಗವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. 2016ರಲ್ಲಿ ಪ್ರಕರಣ ಆಗಿರೋದು. 2018ರಲ್ಲಿ ನಾನೇ ಸಿಎಂ ಇದ್ದೆ. ಆಗ ಯಾಕೆ ನನ್ನ ಬಳಿ ಅನ್ಯಾಯ ಅಂತ ಇವರು ಬರಲಿಲ್ಲ ದೂರು ಕೊಡಲಿಲ್ಲ ಎಂದು ಪ್ರಶ್ನಿಸಿದರು.

10 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿರುವ ರಾಯಚೂರಿನ ಮುಸ್ಲಿಂ ವ್ಯಕ್ತಿ – vishwanews24

Leave a Reply