ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶವನ್ನು ಮಾನವೀಯ ನೆಲೆಯ ಆಧಾರದಲ್ಲಿ ಆಡಳಿತ ನಡೆಸುತ್ತಿತ್ತು, ಬಿಜೆಪಿ ಸರ್ಕಾರದ್ದು ಅಮೇರಿಕಾ ಸ್ಟೈಲ್ : ಯು.ಟಿ ಖಾದರ್ – Vishwanews24
ಜನರನ್ನು ಬೇರೆ ಬೇರೆ ರೀತಿಯಲ್ಲಿ ದಿಕ್ಕು ತಪ್ಪಿಸಲು ಜನರ ಮೌನ ಕೂಡಾ ಒಂದು ರೀತಿ ಕಾರಣ
ಮಂಗಳೂರು: ‘ಜನರನ್ನು ಬೇರೆ ಬೇರೆ ರೀತಿಯಲ್ಲಿ ದಿಕ್ಕು ತಪ್ಪಿಸಲು ಜನರ ಮೌನ ಕೂಡಾ ಒಂದು ರೀತಿ ಕಾರಣ. ಪ್ರತಿ ಸಲ ಪ್ರತಿಪಕ್ಷದವರು ಪ್ರಶ್ನೆ ಮಾಡ್ಬೇಕು ಅಂದ್ರೆ ಇಲ್ಲಿ ಪಕ್ಷದ ಮುಖಂಡರು, ಎಂಪಿಗಳು ಯಾಕೆ ಇರೋದು? ರಾತ್ರಿ ಬೆಳಿಗ್ಗೆ ಆಗುವುದರೊಳಗೆ ಏನೆಲ್ಲ ಬದಲಾವಣೆ ಮಾಡಲು ಆಗುತ್ತೆ ಇದು ಆಗುವುದಿಲ್ಲವಾ? ಇನ್ನು ಶವ ಹೊತ್ತುಕೊಂಡು ಹೋಗುವಾಗ ಅದಕ್ಕೂ ಕೂಡಾ ತೆರಿಗೆ ಹಾಕೋದಿಲ್ಲ ಅಂತ ಏನು ಗ್ಯಾರಂಟಿ’ ಎಂದು ಶಾಸಕ, ವಿಧಾನಸಭೆಯ ವಿರೋಧಪಕ್ಷದ ಉಪನಾಯಕ ಯು.ಟಿ ಖಾದರ್ ಅವರು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಮಾತಾಡಿದ ಅವರು ‘ಕೇಂದ್ರ ಸರ್ಕಾರ ಇವತ್ತು ಅಗತ್ಯ ವಸ್ತುಗಳಲ್ಲಿ ಕೂಡಾ ಜಿಎಸ್ಟಿ ತೆರಿಗೆಯನ್ನು ಹಾಕುವ ಮೂಲಕ ಜನಸಾಮಾನ್ಯರಿಗೆ ಅವರು ದುಡಿಯುವ ದುಡ್ಡಿನಲ್ಲಿ ನಮ್ಮ ಸರ್ಕಾರವನ್ನು ನಡೆಸಲು ಇಂದು ಆರಂಭಿಸಿದ್ದಾರೆ. ತಮ್ಮ ತಪ್ಪು ಸಾಮಾಜಿಕ ನೀತಿಯಿಂದ ದೇಶದ ಆರ್ಥಿಕ ಪರಿಸ್ಥಿತಿಯನ್ನು ತಳಮಟ್ಟಕ್ಕೆ ತಂದು ಹಾಕಿದ್ದಾರೆ.
ತಿನ್ನುವ ಅಕ್ಕಿಯ ಮೇಲೂ ಟ್ಯಾಕ್ಸ್ ಹಾಕ್ತಾರೆ, ಜನನದ ಸಂದರ್ಭ ಕೂಡಾ ತೆರಿಗೆ ಹಾಕ್ತಾರೆ, ಮಕ್ಕಳಿಗೆ ಶಾಲೆಯಲ್ಲಿ ಗ್ಲೋಬ್, ಮ್ಯಾಪ್ ಏನಿದೆ ಅದಕ್ಕೂ ಹಾಕ್ತಾರೆ. ಅಷ್ಟೇ ಅಲ್ಲ ಮಂಡಕ್ಕಿ ಮಾಡುವುದು ಅಕ್ಕಿಯಿಂದ. ಅಕ್ಕಿಗೆ ತೆರಿಗೆ ಹಾಕ್ತಾರೆ ಅದರ ಜೊತೆಗೆ ಮಂಡಕ್ಕಿಗೂ ಕೂಡಾ ತೆರಿಗೆ ಹಾಕ್ತಾರೆ. ಇದಕ್ಕಾಗಿಯೇ ಆವತ್ತು ರಾಹುಲ್ ಗಾಂಧಿ ಹೇಳಿದ್ರು ಗಬ್ಬರ್ಸಿಂಗ್ ಟ್ಯಾಕ್ಸ್ ಅಂತ. ಆದ್ರೆ ಆವತ್ತು ಜನ ತಮಾಷೆ ಮಾಡಿದ್ರು’ ಎಂದು ಕಿಡಿಕಾರಿದರು.
ಎಲ್ಲಕ್ಕಿಂತ ವಿಚಿತ್ರ ಅಂದ್ರೆ ಬ್ಯಾಂಕ್ ಚೆಕ್ಬುಕ್ ಇದೆ ಅಲ್ವಾ ಅದನ್ನು ತೆಗೆದುಕೊಂಡ್ರೆ ಅದಕ್ಕೂ 18 %ಟ್ಯಾಕ್ಸ್. ಪ್ರತಿಯೊಂದರ ಮೇಲೆ ಕೂಡಾ ತೆರಿಗೆ ಹಾಕುತ್ತಿದ್ದಾರೆ. ಆದ್ರೆ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶವನ್ನು ಮಾನವೀಯ ನೆಲೆಯ ಆಧಾರದಲ್ಲಿ ಆಡಳಿತ ನಡೆಸುತ್ತಿತ್ತು. ಈಗ ಬಿಜೆಪಿ ಸರ್ಕಾರದ್ದು ಅಮೇರಿಕಾ ಸ್ಟೈಲ್. ಅದ್ರಲ್ಲಿ ಆಡಳಿತವೂ ಸರಿಯಿಲ್ಲ, ಕಲ್ಚರ್ ಕೂಡಾ ಇಲ್ಲ. ಇಡೀ ದೇಶದಲ್ಲಿ highest ಟ್ಯಾಕ್ಸ್ ಕಟ್ಟುವುದು ಕರ್ನಾಟಕ.
ಇನ್ನು ‘ಎಲ್ಲದಕ್ಕೂ ಟ್ಯಾಕ್ಸ್ ನಿಯಮ ಜಾರಿ ಮಾಡಿ ಜನರನ್ನು ಕಷ್ಟಕ್ಕೆ ತಳ್ಳುತ್ತಿದ್ದರೂ ಕೂಡಾ 25 ಎಂಪಿಗಳು ಇದ್ದರೂ ಕೂಡಾ ಬಾಯಿಗೆ ಪ್ಲಾಸ್ಟರ್ ಹಾಕಿ ಕೂತಿದ್ದಾರೆ. ಬಡವರ ಮೇಲೆ ಎಲ್ಲ ಟ್ಯಾಕ್ಸ್ ಹಾಕ್ತೀರಿ ಅಲ್ವಾ ಹಾಗಾದ್ರೆ ಶ್ರೀಮಂತರ ಕಾರ್ಪೊರೇಟ್ ಟ್ಯಾಕ್ಸ್ ಯಾಕೆ ಕಡಿಮೆ ಮಾಡಿದ್ದು. ಇದು ಯಾವ ಲಾಜಿಕ್.? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಜನರಿಗೆ ಪ್ರಯೋಜನ ಆಗುವ ಒಂದು ಕೆಲಸ ಆದ್ರು ಮಾಡಿದ್ದಾರಾ? ಇವರ ಈ ದುಡ್ಡೆಲ್ಲ ಎಲ್ಲಿಗೆ ಹೋಗುತ್ತೆ….ಬಡವರನ್ನು ಗ್ಯಾಸ್ ಸಬ್ಸಿಡಿ ಡೈರೆಕ್ಟ್ ನಿಮ್ಮ ಅಕೌಂಟ್ಗೆ ಬರುತ್ತೆ ಅಂತ ನಂಬಿಸಿ 400 ರುಪಾಯಿ ಇದ್ದ ಗ್ಯಾಸ್ ರೇಟ್ನ್ನು 1000 ಮಾಡಿದ್ದಾರೆ. ಈಗ ಯಾರ ಅಕೌಂಟ್ಗೆ ಆದ್ರೂ ಹಣ ಬರ್ತಾ ಇದೆಯಾ? ನೇರವಾಗಿ ಹೇಳಲಿ ಸಬ್ಸಿಡಿ ಕೊಡ್ಲಿಕ್ಕೆ ಆಗುವುದಿಲ್ಲ ಅಂತ. ಅದನ್ನು ಬಿಟ್ಟು ನೇರವಾಗಿ ಬ್ಯಾಂಕಿಗೆ ಜಮಾ ಮಾಡ್ತೇವೆ ಅಂತ ನಂಬಿಸಿ ನಾಟಕ ಮಾಡೋದು ಯಾಕೆ’ ಎಂದು ಕಿಡಿಕಾರಿದರು.
ಕಾಲಿನ ಬುಡಕ್ಕೆ ಬಂದ ಪ್ರಧಾನ ಮಂತ್ರಿ ಹುದ್ದೆಯನ್ನು ತಿರಸ್ಕರಿಸಿದ ಸೋನಿಯಾ ಗಾಂಧಿಯ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೂ ಕೂಡಾ ತನಿಖೆ ಮಾಡ್ತಾರೆ ಅಂತ ಹೇಳಿದ್ರೆ ಅದಕ್ಕೆ ಏನು ಹೇಳೋದು. gst is the best policy by congress but worst implemented by bjp government ಎಂದು ರಾಜ್ಯ ಸರ್ಕಾರವನ್ನು ಅಲ್ಲಗಳೆದರು.
