ಕಾಟಿಪಳ್ಳ ಯುವಕನಿಗೆ ಚೂರಿ ಇರಿತ ಪ್ರಕರಣ : ಮೂವರು ಆರೋಪಿಗಳ ಬಂಧನ -Vishwanews24
ಕಾಟಿಪಳ್ಳ ಯುವಕನಿಗೆ ಚೂರಿ ಇರಿತ ಪ್ರಕರಣ : ಮೂವರು ಆರೋಪಿಗಳ ಬಂಧನ -Vishwanews24
ಮಂಗಳೂರು: ಸುರತ್ಕಲ್ ಪೋಲಿಸ್ ಠಾಣಾ ಸರಹದ್ದಿನ ಕಾಟಿಪಳ್ಳ ಗಣೇಶ್ ಪುರ ದೇವಸ್ಥಾನದ ರಸ್ತೆಯಲ್ಲಿ ಜನವರಿ 27ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಯುವಕನಿಗೆ ಚೂರಿ ಇರಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶ್ರೀನಿವಾಸ(20 ವರ್ಷ) , ರಾಜು(20 ವರ್ಷ) ಮತ್ತು ಅಭಿಷೇಕ್ (18ವರ್ಷ) ಎಂದು ಗುರುತಿಸಲಾಗಿದೆ.
ಜನವರಿ 27ರಂದು ರಾತ್ರಿ ಸುಮಾರು 10-45 ಗಂಟೆಗೆ ದ್ವಿಚಕ್ರ ವಾಹನದಲ್ಲಿ ಅವನ ಸ್ನೇಹಿತರೊಂದಿಗೆ ಹೋಗುತ್ತಿದ್ದ ಕಾಟಿಪಳ್ಳ 7 ನೇ ಬ್ಲಾಕ್ ನಿವಾಸಿ ಯುವಕನಿಗೆ ದ್ವಿಚಕ್ರ ವಾಹನದಲ್ಲಿ ಬಂದ 3 ಜನ ದುಷ್ಕರ್ಮಿಗಳು ವಾಹನವನ್ನು ಅಡ್ಡ ಹಾಕಿ ಹಲ್ಲೆ ನಡೆಸಿ ಚೂರಿಯಿಂದ ಇರಿದ ವಿಚಾರಕ್ಕೆ ಸಂಬಂಧಿಸಿದಂತ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಮೂವರ ಆರೋಪಿಗಳನ್ನು ಸುರತ್ಕಲ್ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಕಾಟಿಪಳ್ಳ 1 ನೇ ಬ್ಲಾಕ್ ನಿವಾಸಿಗಳಾದ ಶ್ರೀನಿವಾಸ(20 ವರ್ಷ) ರವರ ವಿರುದ್ಧ ಈಗಾಗಲೇ 3 ಪ್ರಕರಣಗಳು ಆರೋಪಿ ರಾಜು(20 ವರ್ಷ) ರವರ ವಿರುದ್ದ 2 ಪ್ರಕರಣಗಳು ದಾಖಲಾಗಿರುತ್ತದೆ .
ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪೋಲಿಸ್ ಅಯುಕ್ತರಾದ ಎನ್ ಶಶಿ ಕುಮಾರ್ ರವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಲಾಗಿದೆ.
