ಮಂಗಳೂರು: ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಕಾನೂನುಬದ್ಧವಾಗಿ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಯಾರಾದರೂ ಅಡ್ಡಿಪಡಿಸಲು ಯತ್ನಿಸಿದರೆ, ಸಂತ್ರಸ್ತರು ದೂರು ನೀಡಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
“ತಮ್ಮ ಸ್ವಂತ ನೈತಿಕ ನಂಬಿಕೆಗಳ ಆಧಾರದ ಮೇಲೆ ಕಾನೂನುಬದ್ಧ ಚಟುವಟಿಕೆಗಳನ್ನು ತಡೆಯಲು ಯತ್ನಿಸುವವರು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಕೃತ್ಯದ ಗಂಭೀರತೆಯನ್ನು ಆಧರಿಸಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇಂತಹ ಕೃತ್ಯಗಳಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ” ಎಂದಿದ್ದಾರೆ.
“ಯಾರಾದರೂ ಅಕ್ರಮ ಚಟುವಟಿಕೆಗಳನ್ನು ತಡೆಯಲು ಬಯಸಿದರೆ, ಅವರು ನಮಗೆ ಮಾಹಿತಿ ನೀಡಿದರೆ ಸಾಕು. ಅದನ್ನು ತಡೆಯಲು ನಾವೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಕಮಿಷನರ್ ತಿಳಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ದಾಂಡಿಯಾ ಆಚರಣೆಯ ಹೆಸರಿನಲ್ಲಿ ನಗರದ ವಿವಿಧೆಡೆ ಆಯೋಜಿಸಲಾಗುವ ಅಶ್ಲೀಲ ನೃತ್ಯ, ಫ್ಯಾಷನ್ ಶೋ ಹಾಗೂ ಪಾಶ್ಚಿಮಾತ್ಯ ಶೈಲಿಯ ಪಾರ್ಟಿಗಳಿಗೆ ಅನುಮತಿ ನೀಡಬಾರದು ಎಂದು ಕೆಲವು ಸಂಘ ಪರಿವಾರ ಸಂಘಟನೆಗಳು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಈ ಎಚ್ಚರಿಕೆ ನೀಡಿದ್ದಾರೆ.
ಅ 11 ರಿಂದ 21 ರವರೆಗೆ ಉಚ್ಚಿಲ ದಸರಾ - ಅ. 12 ರಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿ…
ಉಡುಪಿ : ಯುವತಿ ನಾಪತ್ತೆ ಉಡುಪಿ: ಉಡುಪಿಯ ಬೀಡಿನಗುಡ್ಡೆ ಹುಲ್ಲಿಕೇರಿ ಪರಿಸರದಲ್ಲಿ ವಾಸವಾಗಿದ್ದ ಐಶ್ವರ್ಯ (18) ಎನ್ನುವ ಯುವತಿಯು ಮನೆಗೆಲಸ…
ಮೈಸೂರು ದಸರಾ ಸಂಭ್ರಮಕ್ಕೆ ಕೆಎಸ್‌ಆರ್‌ಟಿಸಿ ಸಜ್ಜು: 3,000 ಬಸ್‌ಗಳ ವ್ಯವಸ್ಥೆ, ವಿಶೇಷ ಪ್ಯಾಕೇಜ್‌ಗಳ ಸೌಲಭ್ಯ ಮೈಸೂರು: ರಾಜ್ಯಾದ್ಯಂತ ಮೈಸೂರು ದಸರಾ …
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…