ಕಾನೂನು ಹೋರಾಟದಲ್ಲಿ ಡಿಕೆಶಿ ಅವರು ಜಯಗಳಿಸುವ ವಿಶ್ವಾಸ ಇದೆ : ಯು.ಟಿ.ಖಾದರ್ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: “ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಹಾಗೂ ಆದಾಯ ತೆರಿಗೆ ಇಲಾಖೆ ಮೂಲಕ ಬಂಧಿಸುವ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರನ್ನು ಕುತಂತ್ರದಿಂದ ಬಂಧಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾನೂನಾತ್ಮಕವಾಗಿ ಡಿಕೆಶಿ ಅವರದ್ದೇ ರೀತಿ ಹೋರಾಟ ಮಾಡುತ್ತಾರೆ. ಡಿಕೆಶಿ ಜತೆ ನಾವಿದ್ದೇವೆ. ಕಾನೂನು ಹೋರಾಟದಲ್ಲಿಯೂ ಅವರು ಜಯಗಳಿಸುವ ವಿಶ್ವಾಸ ಇದೆ” ಎಂದರು. ”

ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಆರ್‌ಬಿಐನಲ್ಲಿ 3.90 ಲಕ್ಷ ಕೋಟಿ ರೂಪಾಯಿ ಹಣ ಆರ್‌ಬಿಐನಲ್ಲಿತ್ತು. ಅದರಲ್ಲಿ 1.76 ಲಕ್ಷ ಕೋಟಿ ಹಣವನ್ನು ಕೇಂದ್ರ ಪಡೆದಿದೆ. ದೇಶಕ್ಕಾಗಿ ನಾವು ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಬಹುದು. ಆದರೆ ಪಾರದರ್ಶಕ ಆಡಳಿತದ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ಈ ಹಣವನ್ನು ಯಾಕಾಗಿ ಪಡೆದಿದೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಬೇಕು. ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆಗೆ ಮುಂದಾಗುವವರು ಹಿಂದೇಟು ಹಾಕುತ್ತಾರೆ” ಎಂದು ಹೇಳಿದರು.