ಇಂದು ಕಾಪುವಿನಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ಆಗಮಿಸಲಿದ್ದಾರೆ ಮಾಜಿ ಪ್ರಧಾನಿ ಎಚ್ಡಿ .ದೇವೇಗೌಡ -Vishwanews24
ಉಡುಪಿ,: ಉಡುಪಿಯ ಕಾಪುವಿನಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ಮಾಜಿ ಪ್ರಧಾನಿ ಎಚ್ಡಿ .ದೇವೇಗೌಡರು ಆಗಮಿಸಲಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿಗೆ ರಸ್ತೆ ಪ್ರಯಾಣ ಬೆಳೆಸಲಿರುವ ದೇವೇಗೌಡ ಅವರು ಮೂಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಪಂಚಕರ್ಮ ಚಿಕಿತ್ಸೆ ನಡೆಸಲಿದ್ದಾರೆ. ದೇವೇ ಗೌಡರ ಜೊತೆಗೆ ಪ್ರಕೃತಿ ಚಿಕಿತ್ಸೆ ಪಡೆಯಲು ಪತ್ನಿ ಚನ್ನಮ್ಮನವರು ಕೂಡಾ ಆಗಮಿಸಲಿದ್ದಾರೆ.
ಪ್ರಕೃತಿ ಚಿಕಿತ್ಸೆಯ ಬಳಿಕ ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಭೇಟಿ ನೀಡುವ ಸಾಧ್ಯತೆ ಇದೆ. ಹಾಗೂ ಮೂಕಾಂಬಿಕಾ ದೇವಸ್ಥಾನದಲ್ಲೂ ಚಂಡಿಕಾಯಾಗ ನಡೆಸುವ ಸಾಧ್ಯತೆ ಇದೆ.
ಮೇ. 16ರ ವರೆಗೆ ಚಿಕಿತ್ಸೆ ಪಡೆಯಲಿದ್ದಾರೆ. ಮೇ 18ರಂದು ದೇವೇಗೌಡರ 86ನೇ ಜನ್ಮದಿನ. ಹಾಗಾಗಿ 17ರಂದು ತಿರುಪತಿಗೆ ಪ್ರಯಾಣ ಬೆಳೆಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
