ಉಡುಪಿ: ಹೊಸ ಕಾಪು ತಾಲೂಕು ಆಗಿ ಸುಮಾರು 5 ವರ್ಷಗಳೇ ಕಳೆದರೂ ಇನ್ನೂ ಕೂಡಾ ಕಾಪುವಿನಲ್ಲಿ ಹೊಸ ಸಬ್‍ರಿಜಿಸ್ಟ್ರಾರ್ ಕಛೇರಿಯ ಆರಂಭ ಆಗದೇ ಇರುವುದನ್ನು ನ್ಯಾಯವಾದಿ ಮೆಲ್ವಿನ್ ಡಿಸೋಜರವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ಕಾಪು ತಾಲೂಕಿನ ಜನರು ಉಡುಪಿ ಅಥವಾ ಮುಲ್ಕಿ ಸಬ್‍ರಿಜಿಸ್ಟ್ರಾರ್ ಕಛೇರಿಗೆ ಹೋಗಿ ದಸ್ತಾವೇಜು ನೊಂದಾಯಿಸಬೇಕಾಗಿದೆ. ಮುಲ್ಕಿಗೆ ಹೋಗಲು ಟೋಲ್ ಕಟ್ಟಬೇಕಾಗಿದೆ. ಕಾಪು ತಾಲೂಕಿಗೆ ಹೊಸ ಕಟ್ಟಡ ನಿರ್ಮಾಣವಾದರೂ ಕಾಮಗಾರಿ ಸಂಪೂರ್ಣ ಆಗದೇ ಇನ್ನೂ ಕೂಡಾ ಅಲ್ಲಿಗೆ ಯಾವುದೇ ಕಛೇರಿಗಳು ವರ್ಗಾವಣೆ ಆಗಿರುವುದಿಲ್ಲ. ಕಾಪು ತಾಲೂಕಿನ ಅನೇಕ ಕಡತಗಳು ಇನ್ನೂ ಕೂಡಾ ಉಡುಪಿ ತಾಲೂಕು ಕಛೇರಿಯಲ್ಲಿಯೇ ಇದ್ದು ಕಾಪುವಿಗೆ ವರ್ಗಾವಣೆ ಆಗದೇ ಇರುವುದು ಹಿಂದಿನ 5 ವರ್ಷ ಕೆಲಸ ಮಾಡಿದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿರುತ್ತದೆ. ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಕಾಪುವಿಗೆ ಹೊಸ ಸಬ್ ರಿಜಿಸ್ಟ್ರಾರ್ ಕಛೇರಿ ಸ್ಥಾಪನೆ ಎಂದು ಪತ್ರಿಕೆಯಲ್ಲಿ ಬಂದಿರುವುದು ಈಗ ರಚನೆಯಾಗದೇ ಇರುವುದು ಕೇವಲ ಚುನಾವಣಾ ಗಿಮಿಕ್ ಎಂದು ಸ್ಪಷ್ಟವಾಗಿದೆ. ಜನರು ಒಮ್ಮೆ ಉಡುಪಿಗೆ ಮತ್ತೊಮ್ಮೆ ಕಾಪುವಿಗೆ ಅಲೆದಾಡುವಂತಾಗಿದೆ. ಕೂಡಲೇ ಕಾಪುವಿನಲ್ಲಿ ಹೊಸ ಸಬ್ ರಿಜಿಸ್ಟ್ರಾರ್ ಕಛೇರಿ ಹಾಗೂ ಕಾಪು ತಾಲೂಕಿಗೆ ಸಿಗಬೇಕಾದ ಸೌಲಭ್ಯಗಳು ಕೂಡಲೇ ಸಿಗುವಂತೆ ಮಾಡಲು ಈಗಿನ ಶಾಸಕರು ಶ್ರಮವಹಿಸಬೇಕಾಗಿ ಅವರು ಆಗ್ರಹಿಸಿದ್ದಾರೆ.
ಕಾಪು ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆಯವರ ಕನಸಿನ ಕೂಸು ಕಾಪು ತಾಲೂಕು ಅವರ ಅನುಪಸ್ಥಿತಿಯಲ್ಲಿ ಸೌಲಭ್ಯ ವಂಚಿತವಾಗಿದೆ. ಕಾಪು ಕ್ಷೇತ್ರದ ಅಭಿವೃದ್ಧಿಯ ಹರಿಕಾರ ವಿನಯ್ ಕುಮಾರ್ ಸೊರಕೆಯವರು ಶಾಸಕರಾಗಿದ್ದಲ್ಲಿ ಕಾಪು ತಾಲೂಕು ಎಲ್ಲಾ ಸೌಲಭ್ಯಗಳನ್ನು ಹೊಂದಿದ ಹೊಸ ತಾಲೂಕು ಆಗಿ ಮೂಡಿ ಬರುವುದರಲ್ಲಿ ಯಾವುದೇ ಸಂಶಯ ಇರಲಿಲ್ಲ ಹಾಗೂ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಂದಾಯ ಸಚಿವರಿಗೆ ಕೂಡಾ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ನ್ಯಾಯವಾದಿ ಹಾಗೂ ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರೂ ಆದ ಮೆಲ್ವಿನ್ ಡಿಸೋಜರವರು ಅವರು ತಿಳಿಸಿದ್ದಾರೆ.
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…