ಉಡುಪಿ

ಕಾಪುವಿನಲ್ಲಿ ಜೆಡಿಎಸ್ ಖಾತೆ ತೆರೆಯುವುದು ಶತಸಿದ್ದ : ಮನ್ಸೂರ್ ಇಬ್ರಾಹಿಮ್

 

ಕಾಪು : ಹೌದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಜೆಡಿಎಸ್ ಹೊಸ ಇತಿಹಾಸವನ್ನೆ ಬರೆಯಲು ಹೊರಟಂತಿದೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜೆಡಿಎಸ್ ತನ್ನ ಚುನಾವಣಾ ಕಾರ್ಯವ್ಯಾಪ್ತಿಯನ್ನ ಮುಂದುವರೆಸಿ ಕ್ಷೇತ್ರದೆಲ್ಲೆಡೆ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್ ರ ಮಿಂಚಿನ ಸಂಚಾರ ಚುನಾವಣಾ ಮತ ಬೇಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ, ಕೇವಲ ಹತ್ತು ದಿನಗಳ ಅವಧಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಹೊಸ ಕಾರ್ಯಕರ್ತರನ್ನ ಪಕ್ಷಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ಅವರೆಲ್ಲರೂ ಪೀಲ್ಡ್ ಗೆ ಇಳಿದಿರುವುದು ಮತ್ತೊಂದು ವಿಶೇಷ.ಮತ್ತು ಕಾಪುವಿನ‌ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳ ,ಜಾತಿ ಧರ್ಮದ ಗೊಜಲಿನಲ್ಲಿ‌ ಜನರನ್ನ‌ ದಿಕ್ಕು ತಪ್ಪಿಸುತ್ತಿರುವುದರಿಂದ ಈ ಭಾರಿ ಹೊಸ ಶಾಸಕರನ್ನ ಕಾಣುವಲ್ಲಿ ಕ್ಷೇತ್ರದ ಜನ ಬಹುಪರಾಕ್ ಎನ್ನುತ್ತಿರುವುದು ಜೆಡಿಎಸ್ ಗೆ ವರದಾನವಾಗಿದೆ.

ಕಾಪುವಿನ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕಾಪುವನ್ನ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಿ ನೂತನ ತಾಲೂಕಿಗೆ ಹೊಸ ಆಯಾಮ‌ ದೊರಕಿಸುವ ನಿಟ್ಟಿನಲ್ಲಿ ಜನ ಜೆಡಿಎಸ್ ಬೆಂಬಲಿಸಬೇಕಾಗಿದೆ ಎಂಬುದು ಇಬ್ರಾಹಿಮ್ ಅಭಿಲಾಷೆ.ಇದುವರೆಗೆ ಆಡಳಿತ ನಡೆಸಿದ ಶಾಸಕರಿಗಿಂತ ವಿಭಿನ್ನ ರೀತಿಯಲ್ಲಿ ಆಡಳಿತ ನಡೆಸಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಯೋಜನೆಲ್ಲಿದ್ದಾರೆ ಈ ಭಾರಿಯ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್.

ಸರ್ವಧರ್ಮ ಸಮನ್ವಯತೆ ಕಾಯ್ದ ಇಬ್ರಾಹಿಮ್.

ಚುನಾವಣೆ ನಿಲ್ಲುವ ಹಿಂದಿನಿಂದಲೂ ಇಬ್ರಾಹಿಮ್ ಸರ್ವಧರ್ಮ ಸಮನ್ವಯತೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ, ಎಲ್ಲರನ್ನು ಒಂದೆ ತಕ್ಕಡಿಯಲ್ಲಿ ತೂಗಿ ಸರ್ವರಿಗೂ ಗೌರವ ತೋರಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಎಲ್ಲರೂ ಒಂದಾಗಿ ಸಾಗಿ ದೇಶಕಟ್ಟಬೇಕು, ಬಡವರ ದೀನದಲಿತರ ಬಗ್ಗೆ ವಿಶೇಷ ಕಾಲಜಿ ವಹಿಸುತ್ತಿರುವ ಇಬ್ರಾಹಿಮ್ ಈ ಭಾರಿ ಗದ್ದುಗೆ ಏರಿದರೆ ಜನರ ಸಂಕಷ್ಟಗಳಿಗೆ ಮನೆ ಬಾಗಿಲಿಗೆ ಬಂದು ಪರಿಹಾರ ಒದಗಿಸುವಲ್ಲಿಯೂ ನಾವು ಶತಸಿದ್ಧ ಅನ್ನುವುದರಲ್ಲಿ ಅನುಮಾನವಿಲ್ಲ, ಚರ್ಚ್, ಮಸೀದಿ ದೇವಸ್ಥಾನವೆನ್ನದೆ ಎಲ್ಲರೊಂದಿಗು ಬೆರೆಯುತ್ತಿದ್ದು ಜನರ ಸಂಕಷ್ಟಗಳಿಗೆ ನೇರವಾಗಿ ಬಂದು ಪರಿಹಾರ ಒದಗಿಸಿದ ಉದಾಹರಣೆಗಳು ಅದೆಷ್ಟು ಲೆಕ್ಕಕ್ಕೆ ಸಿಗದಷ್ಟು ಅನ್ನುತ್ತಾರೆ ಇಬ್ರಾಹಿಮ್ ಆಪ್ತರು.

ಇಬ್ರಾಹಿಮ್ ಕೈ ಹಿಡಿಯುವರೇ ಮುಸ್ಲಿಂ ಭಾಂಧವರು

ಕಾಪು ಕ್ಷೇತ್ರದಲ್ಲಿ ಇದುವರೆಗೆ ಮುಸ್ಲಿಂ ಧರ್ಮದ ನಾಯಕ‌ ಶಾಸಕನಾದ ಇತಿಹಾಸವಿಲ್ಲ . ಎರಡೂ ರಾಷ್ಟ್ರೀಯ ಪಕ್ಷಗಳು ಬಹುಸಂಖ್ಯಾತ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ , ಆದರೇ ಜೆಡಿಎಸ್ ಈ ಭಾರಿ ಮುಸ್ಲಿಂ ಸಮಾಜದ ನಾಯಕನಿಗೆ ಮಣೆ ಹಾಕಿ ಅಲ್ಪಸಂಖ್ಯಾತರಿಗೂ ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಈ ಭಾರಿ ಚುನಾವಣಾ ರಂಗ ಮತ್ತಷ್ಟು ಕಾವು ಪಡೆದುಕೊಂಡಿದೆ.

“ನನಗೆ ಜಾತಿ ಮತ ಭೇದವಿಲ್ಲ, ಸರ್ವರೂ ಒಂದೆ ಸೂರಿನಡಿಯಲ್ಲಿ ಬಾಳಬೇಕು ಅದು ಸಂವಿಧಾನ,ಶಾಸಕನಾದವರು ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುವುದು ಅವರ ಕರ್ತವ್ಯ ‌ಮತ್ತು ಧರ್ಮ ಹೊರತು ಪ್ರಚಾರವಲ್ಲ.ಜನರನ್ನು ಜಾತಿ ಧರ್ಮದಿಂದ ಒಡೆದು ಇಭ್ಭಾಗ ಮಾಡುವ ಕೆಲಸ ರಾಷ್ಟ್ರೀಯ ಪಕ್ಷಗಳು ಮಾಡುತ್ತಿದೆ ಇದರಿಂದ ಜನ ಬೇಸತ್ತು ಹೋಗಿದ್ದಾರೆ ಹಾಗಾಗಿ ಈ ಸಲ‌ ಒಂದು ಬಾರಿ ಜೆಡಿಎಸ್ ಗೆ ಅವಕಾಶ ನೀಡುತ್ತಾರೆಂಬ ಭರವಸೆ ಇದೆ. ಜನರ ಮನೆಬಾಗಿಲಿಗೆ ಸೌಕರ್ಯ ಮುಟ್ಟಿಸುವ ಪ್ರಯತ್ನ ಮಾಡಬೇಕಿದೆಂಬುದು ನನ್ನ‌ ಆಶಯ ಮತ್ತು ಜನ ಈ ಭಾರಿ ಜೆಡಿಎಸ್ ಗೆ ಬಹುಪರಾಕ್ ಎನ್ನುತ್ತಿರುವುದರಿಂದ ಕಾಪುವಿನಲ್ಲಿ ಖಾತೆ ತೆರೆಯುವುದು ಶತ ಸಿದ್ಧ “.

                      ಮನ್ಸೂರ್ ಇಬ್ರಾಹಿಮ್ 

                  ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ

(ಕಟಪಾಡಿ ಚುನಾವಣಾ ಪ್ರಚಾರ ಸಮಯದಲ್ಲಿ ನೀಡಿದ ಹೇಳಿಕೆ)

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

2 days ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

2 days ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

2 days ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

2 days ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

3 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

3 days ago