ಕಾಪುವಿನಲ್ಲಿ ದೀಪಾವಳಿಯ ರಂಗು ಹೆಚ್ಚಿಸಿದ ಶ್ರೀಶಾ ನಾಯಕ್ ನೇತೃತ್ವದ ಗೂಡುದೀಪ ಸ್ಪರ್ಧೆ – Vishwanews24
ಕಾಪುವಿನಲ್ಲಿ ದೀಪಾವಳಿಯ ರಂಗು ಹೆಚ್ಚಿಸಿದ ಶ್ರೀಶಾ ನಾಯಕ್ ನೇತೃತ್ವದ ಗೂಡುದೀಪ ಸ್ಪರ್ಧೆ
ಪೆರ್ಣಂಕಿಲ ಶಂಕರ ಪ್ರತಿಷ್ಠಾನದಿಂದ ಆರೋಗ್ಯ-ಗೃಹ ನಿರ್ಮಾಣಕ್ಕೆ ಧನ ಸಹಾಯ
ಪ್ರತಿಫಲ ಅಪೇಕ್ಷೆಯಿಲ್ಲದ ಕಾಪು ಕ್ಷೇತ್ರದ ಸಮಾಜ ಸೇವಕ ಶ್ರೀಶ ನಾಯಕ್
ಕಾಪು : ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಶ್ರೀಶ ನಾಯಕ್ ನೇತೃತ್ವದಲ್ಲಿ ರವಿವಾರ ಕಾಪು ಬೀಚ್ ನಲ್ಲಿ ಗೂಡುದೀಪ ಸ್ಪರ್ಧೆಯು ಕಾಪುವಿನಲ್ಲಿ ಈ ಬಾರಿಯ ದೀಪಾವಳಿಯ ರಂಗು ಹೆಚ್ಚಿಸಿತು.


ಟ್ರಸ್ಟ್ ಮುಖೇನ ವಿವಿಧ ಧಾರ್ಮಿಕ-ಸಾಂಸ್ಕೃತಿಕ-ಶೈಕ್ಷಣಿಕ-ಆರೋಗ್ಯ ಮತ್ತು ಗೃಹ ನಿರ್ಮಾಣದಂತಹ ಯೋಜನೆಗಳಿಗೆ ಧನ ಸಹಾಯ ಮಾಡುತ್ತಾ ಬಂದಿರುವ ಶ್ರೀಶ ನಾಯಕ್ ಈ ಕಾರ್ಯ ಜನಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಕಾಪು ಕ್ಷೇತ್ರದಲ್ಲಿ ಸಮಾಜ ಮುಖಿ ವ್ಯಕ್ತಿಯಾಗಿ ಶ್ರೀಶ ನಾಯಕ್ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು ಪ್ರತಿ ವರ್ಷವೂ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಲ್ಲಿ ತನ್ನದೆ ಆದ ಸೇವೆ ನಡೆಸುತ್ತಿರುವ ಬಗ್ಗೆ ಯುವಕರಿಗೆ ಟ್ರಸ್ಟ್ ಮೇಲಿನ ನಂಬಿಕೆ ಜಾಸ್ತಿ ಮಾಡುತ್ತಿದೆ.

ಈ ಸಲ ನಡೆಸಿರುವ ಗೂಡುದೀಪ ಸ್ಪರ್ಧೆ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪುಷ್ಟಿ ನೀಡುವಲ್ಲಿ ಸಹಕರಿಸಿದ್ದು ಮುಂದಿನ ದಿನಗಳಲ್ಲಿ ಲೋಕಾ ಕಲ್ಯಾಣಾರ್ಥವಾಗಿ ಹಿರಿಯಡ್ಕ ವೀರಭದ್ರ ದೇವಸ್ಥಾನದಲ್ಲಿ ಸಹಸ್ರ ದೀಪಾರ್ಚನೆ ಕಾರ್ಯಕ್ರಮ ನಡೆಯಲಿದೆ

