ಕಾಪು‌ಮತ ಎಣಿಕೆ ಕೇಂದ್ರದಲ್ಲಿ ಇನ್ನೂ ಮುಗಿಯದ ಮತ ಎಣಿಕೆ-ಮುಕ್ತಾಯ ಹಂತ ತಲುಪಲು ಮಧ್ಯ ರಾತ್ರಿಯಾಗುವ ಸಾಧ್ಯತೆ.- vishwanews24

Featured, ಉಡುಪಿ

ಕಾಪು‌ಮತ ಎಣಿಕೆ ಕೇಂದ್ರದಲ್ಲಿ ಇನ್ನೂ ಮುಗಿಯದ ಮತ ಎಣಿಕೆ-ಮಧ್ಯರಾತ್ರಿಯಾಗುವ ಸಾಧ್ಯತೆ

ಕಾಪು: ಹೊಸದಾಗಿ ಘೋಷಣೆಯಾದ ಕಾಪು ತಾಲೂಕಿನಲ್ಲಿ ಈ ಬಾರಿ ಮೊದಲ ಸಲ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯನ್ನು ಕಾಪು‌ ಉಳಿಯಾರಗೊಳಿಯ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಗುತ್ತಿದೆ.
ಬೆಳಗ್ಗೆ 8.30 ರ ಸುಮಾರಿಗೆ ಆರಂಭದವಾದ ಮತ ಎಣಿಕೆ ಪ್ರಕ್ರಿಯೆ ತಡರಾತ್ರಿ ಹನ್ನೊಂದು ಆದರೂ ಮುಗಿಯಲಿಲ್ಲ.
ಪ್ರಸ್ತುತ ಇನ್ನೂ ಸುಮಾರು ನಾಲ್ಕು ಪಂಚಾಯತ್ ನ 20 ಅಭ್ಯರ್ಥಿಗಳ ಮತ ಎಣಿಕೆ ಬಾಕಿಯಿದ್ದು ಸುಮಾರು ಮಧ್ಯರಾತ್ರಿ ಆಗುವ ಸಾಧ್ಯತೆ ಎನ್ನಲಾಗುತ್ತಿದೆ.