ಕಾಪು ಅಕ್ರಮ ಕಸಾಯಿಖಾನೆಗೆ ಪೋಲಿಸರಿಂದ ದಾಳಿ-ಗೋವುಗಳ ರಕ್ಷಣೆ-ಖಾಕಿ ಕಂಡು ಎಸ್ಕೇಪ್ ಆದ ಖಧೀಮರು: vishwanews24

Featured, ಉಡುಪಿ

ಕಾಪು : ಮಂಗಳವಾರ ಮಲ್ಲಾರು ಗುಡ್ಡೆಕೇರಿಯಲ್ಲಿನ ಅಕ್ರಮ ಜಾನವಾರು ವಧಾ ಕೇಂದ್ರಕ್ಕೆ ಧಾಳಿ ನಡೆಸಿದ ಕಾಪು ಪೊಲೀಸರು ಕಟುಕರ ಕೈಗೆ ಬಲಿಯಾಗಬೇಕಿದ್ದ 10 ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆಯ ವೇಳೆ 31 ಸಾವಿರ ಮೌಲ್ಯದ ಹತ್ತು ದನ – ಕರುಗಳು ಮತ್ತು ವಧೆಗೆ ಬಳಸುತ್ತಿದ್ದ ಸಾಮಾಗ್ರಿಗಳು ಹಾಗೂ ಆರೋಪಿಗಳು ನಿಲ್ಲಿಸಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಕಾಪು ಎಸ್‌ಐ ರಾಜಶೇಖರ್ ಬಿ. ಸಾಗನೂರು ಅವರಿಗೆ ಬೀಟ್ ಪೊಲೀಸ್ ಸಿಬಂದಿಯ ಮೂಲಕ ದೊರಕಿದ ಖಚಿತ ಮಾಹಿತಿಯ ಮೇರೆಗೆ ಸಿಬಂದಿಗಳಾದ ರವೀಂದ್ರ, ಅರುಣ್, ಮಂಜುನಾಥ, ಆನಂದ್, ಸಂದೇಶ, ಪರಶುರಾಮ ಅವರು ಜೊತೆ ಸೇರಿ ಕಾರ್ಯಚರಣೆ ನಡೆಸಿದ್ದರು.

ಅಕ್ರಮ ವಧಾ ಕೇಂದ್ರವನ್ನು ನಡೆಸುತ್ತಿದ್ದ ಅಬ್ದುಲ್ ಸತ್ತಾರ್, ನಾಜಿಮ್, ಶಂಶುದ್ದೀನ್, ಹಸನಬ್ಬ, ಶಾಹಿದ್, ಆರಿಫ್ ಸಹಿತ ಸ್ಥಳದಲ್ಲಿದ್ದ ಎಂಟು ಮಂದಿ ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸರು ರಕ್ಷಿಸಿದ ದನಗಳನ್ನು ನೀಲಾವರ ಗೋಶಾಲೆಗೆ ಸ್ಥಳಾಂತರಿಸಲಾಗಿದೆ.