ಕಾಪು : ಇರುವ ಗ್ರಾಹಕರನ್ನು ಉಳಿಸಿಕೊಂಡು ಹೊಸ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನಂದಿನಿ ಸಿಹಿ ಉತ್ಸವ : ಕಾಪು ದಿವಾಕರ ಶೆಟ್ಟಿ – Vishwanews24
ಕಾಪು : ಇರುವ ಗ್ರಾಹಕರನ್ನು ಉಳಿಸಿಕೊಂಡು ಹೊಸ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನಂದಿನಿ ಸಿಹಿ ಉತ್ಸವ : ಕಾಪು ದಿವಾಕರ ಶೆಟ್ಟಿ
ಕಾಪುವಿನಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸಿಹಿ ಉತ್ಸವ
ಕೆಎಂಎಫ್ ಮಂಗಳೂರು ಡೈರಿ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿರುವ ನಂದಿನಿ ಉತ್ಪನ್ನಗಳ ಮಾರಾಟ ಸಿಹಿ ಉತ್ಸವವನ್ನು ಕಾಪುವಿನಲ್ಲಿ ಉದ್ಘಾಟಿಸಲಾಯಿತು.
ಮಳಿಗೆಯನ್ನು ಉದ್ಘಾಟಿಸಿದ ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಶೇ.20 ರಿಯಾಯಿತಿಯೊಂದಿಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಾರ್ಯಕ್ರಮ ಇದಾಗಿದ್ದು ನಮ್ಮಲ್ಲಿರುವ ಗ್ರಾಹಕರನ್ನ ಉಳಿಸಿಕೊಂಡು ಹೊಸ ಗ್ರಹಕರನ್ನ ನಂದಿನಿಯ ಕಡೆಗೆ ಸೆಳೆಯುವ ಉದ್ದೇಶದಿಂದ ಒಕ್ಕೂಟ ವ್ಯಾಪ್ತಿಯ ಪ್ರತೀ ತಾಲೂಕಿನಲ್ಲಿಯೂ ಸಿಹಿ ಉತ್ಸವ ನಡೆಯಲಿದೆ ಎಂದರು.

ಕೆಎಂಎಫ್ ಮಾರುಕಟ್ಟೆ ಪ್ರಬಂಧಕ ಡಾ. ರವಿರಾಜ ಉಡುಪ, ಡಿಪ್ಪೋ ಮೆನೇಜರ್ ರಮೇಶ್ ಗೋದುಗಟ್ಟಿ, ಮಾರುಕಟ್ಟೆ ಅಧಿಕಾರಿಗಳಾದ ಮೋಹನ್, ಸಂದೀಪ್ ನಾಯಕ್, ಉಡುಪಿ ಮಾರುಕಟ್ಟೆ ವಿಭಾಗ ಉಪ ವ್ಯವಸ್ಥಾಪಕ ಸುಧಾಕರ್, ಮಳಿಗೆ ಮಾಲಕರಾದ ಹರೀಶ್ ನಾಯಕ್, ಕಮಲಾಕ್ಷ ನಾಯಕ್, ಪ್ರೀತಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
