ಕಾಪು ಕ್ಷೇತ್ರಕ್ಕೆ ಸೂಕ್ತ ಅನುದಾನ ನೀಡುವಂತೆ ಮುಖ್ಯಮಂತ್ರಿ ಜತೆ ಲಾಲಾಜಿ ಚರ್ಚೆ, ಸಕರಾತ್ಮಕ ಸ್ಪಂದಿಸಿದ ಬಿಎಸ್ವೈ
ಕಾಪು ಕ್ಷೇತ್ರಕ್ಕೆ ಸೂಕ್ತ ಅನುದಾನ ನೀಡುವಂತೆ ಮುಖ್ಯಮಂತ್ರಿ ಜತೆ ಲಾಲಾಜಿ ಚರ್ಚೆ, ಸಕರಾತ್ಮಕ ಸ್ಪಂದಿಸಿದ ಬಿಎಸ್ವೈ
ಕಾಪು: ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್ ಯಡಿಯೂರಪ್ಪರವರನ್ನು ಗೃಹ ಕಚೇರಿಯಲ್ಲಿ ಭೇಟಿಯಾದ ಕಾಪು ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್. ಕಾಪು ಪುರಸಭೆ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು. ಕಾಪು ತಾಲೂಕು ಪಂಚಾಯತ್ಗೆ ಎಲ್ಲಾ 32 ಇಲಾಖೆಗಳ ವರ್ಗಾವಣೆ ಬಗ್ಗೆ ಹಾಗೂ ಕಾಪುಗೆ ನೂತನ ಮಿನಿ ವಿಧಾನಸೌಧ ಹಾಗೂ ಪ್ರವಾಸಿ ಮಂದಿರ ನಿರ್ಮಾಣ, ಕಾಪು ಪ್ರಾಥಮಿಕ ಅರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುದು, ಹೆಜಮಾಡಿ ಬಂದರುಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸುವಂತೆ, ಕಾಪು ಘನ ತ್ಯಾಜ ಘಟಕದ ಬಗ್ಗೆ ಸೂಕ್ತವಾದ ಕ್ರಮ, ಕಾಪು ಪೇಟೆಯ ವ್ಯವಸ್ಥಿತವಾದ ಒಳ ಚರಂಡಿ ವ್ಯವಸ್ಥೆ, ಪ್ರಕೃತಿವಿಕೋಪಕ್ಕೆ ಹಾನಿಗೊಳಗಾದ ರಸ್ತೆ ಅಭಿವೃದ್ಧಿ ಬಗ್ಗೆ, ಕಾಪು ಬೀಚ್ ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಹಾಗೂ ವಿವಿಧ ಕಾಮಗಾರಿಗಳ ಮತ್ತು ಹೆಚ್ಚಿನ ಅನುದಾನ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರು ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಶ್ರೀ ಬಿ.ಎಸ್ ಯಡಿಯೂರಪ್ಪನವರು ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

