ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ನಾಮ ಪತ್ರ ಸಲ್ಲಿಕೆ

Featured, ಉಡುಪಿ

ಕಾಪು : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಏಪ್ರಿಲ್ 23 ರಂದು ಬೆಳಗ್ಗೆ 11 ಗಂಟೆಗೆ ನಾಮ‌ಪತ್ರ ಸಲ್ಲಿಸಲಿದ್ದೆನೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಾಮ‌ಪತ್ರ ಸಲ್ಲಿಸುವ ಮುನ್ನ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನ,ಮತ್ತು ಕಾಪು ಮಸೀಧಿ,ಉದ್ಯವಾರ ಚರ್ಚ್, ಶ್ರೀ ಕೃಷ್ಣ ಮಠ, ಮತ್ತು ವಿಶ್ವನಾಥ ಕ್ಷೇತ್ರ ಗಳಲ್ಲಿ ಪೂಜೆ , ಪ್ರಾರ್ಥನೆ ಸಲ್ಲಿಸಲಾಗುವುದು.
ನಂತರ ಅಪಾರ ಬೆಂಬಲಿಗರ ಕಾರ್ಯಕರ್ತರೊಂದಿಗೆ ಮೆರವಣಿಗೆ ಮುಖಾಂತರ ಸಾಗಿ ನಾಮ ಪತ್ರ ಸಲ್ಲಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ್ ಶೆಟ್ಟಿ, ಕಾಪು ಪುರಸಬೆ ಉಪಾಧ್ಯಕ್ಷ ಉಸ್ಮಾನ್, ಮತ್ತು ಉಸ್ತುವಾರಿಯಾದ ಮಹಾಬಲ ಕುಂದರ್, ಉಪಸ್ಥಿತಿತರಿದ್ದರು.