ಕಾಪು ಗಣೇಶೋತ್ಸವ : ನಿಮ್ಮ ಮನರಂಜನೆಗಾಗಿ ಕಾಪುದ ಫ್ರೆಂಡ್ಸ್ “ಪಿಲಿ ಬುಡ್ತೆರ್” – vishwanews24
ಕಾಪುದ ಫ್ರೆಂಡ್ಸ್ “ಕಾಪುಡು ಪಿಲಿ ಬುಡ್ತೆರ್” ನಿಮ್ಮ ಮನರಂಜನೆಗಾಗಿ “ಪಿಲಿ ಬುಡ್ತೆರ್”
ಕಾಪು ಗಣೇಶೋತ್ಸವ ಮೆರವಣಿಗೆಯಲ್ಲಿನ ಈ ಸಲದ ಆಕರ್ಷಣೆ “ಕಾಪುದ ಪಿಲಿಕುಲು”
ಕಾಪು: ತುಳುನಾಡಿನ ಜಾನಪದ ಹಾಗೂ ಧಾರ್ಮಿಕ ಭಾವನೆಯ ಹುಲಿ ವೇಷ ಕುಣಿತ ಇತ್ತೀಚೆಗೆ ಭರ್ಜರಿಯಾಗಿಯೇ ನಡೆಯುತ್ತಿದೆ.ಅಷ್ಟಮೀ,ಗಣೇಶ ಚತುರ್ಥಿ, ನವರಾತ್ರಿ ಹೀಗೆ ಹತ್ತು ಹಲವಾರು ಹಬ್ಬ ಹರಿದಿನಗಳಲ್ಲಿ ಯುವಕ – ಯುವತಿಯರು ಹುಲಿವೇಷ ಧರಿಸಿ ಆಕರ್ಷಣೀಯ ಕುಣಿತದೊಂದಿಗೆ ಮನರಂಜನೆ ನೀಡುವ ಉದ್ದೇಶದಿಂದ ನಡೆಯುತ್ತಿದೆ.
ಹೀಗೆಯೇ ಕಾಪು ಗಣೇಶೋತ್ಸವದ ಪ್ರಯುಕ್ತ ವಿಸರ್ಜನೆಯ ಕಡೆಯ ದಿನದ ಅಂಗವಾಗಿ ಸಮಾನ ಮನಸ್ಕರ ಯುವಕರ ತಂಡ “ಕಾಪು ಫ್ರೆಂಡ್ಸ್” ನಾಮಾಂಕಿತದೊಂದಿಗೆ ಮೊದಲನೇ ವರ್ಷದ ಹುಲಿವೇಷ ಕುಣಿತ ನಡೆಯುತ್ತಿದೆ.
ಬುಧವಾರ ಬೆಳಗ್ಗೆ ಲೋಭಾನ ಸೇವೆಯೊಂದಿಗೆ ಆರಂಭವಾಗಿ ಗಣೇಶ ವಿಸರ್ಜನೆಯವರೆಗೆ ಜಿಲ್ಲೆಯ ವಿವಿಧ ಭಾಗದಲ್ಲಿ ಪ್ರದರ್ಶನ ಮಾಡಲಿದ್ದಾರೆ.
ತುಳುನಾಡಿನಲ್ಲಿ ಯಾವುದೇ ಮೆರವಣಿಗೆಯುಳ್ಳ ಕಾರ್ಯಕ್ರಮವಾದರೂ ಸರಿ ಹುಲಿ ವೇಷಗಳಿದ್ದರೆ ಅದರ ಗತ್ತು ಮತ್ತಷ್ಟು ದ್ವಿಗುಣವಾಗುತ್ತದೆ.
ಈ ಸಲ ನವ ಯುವಕರ ತಂಡ ಕಾಪುವಿನಲ್ಲಿ “ಪಿಲಿ ಬುಡ್ತೆರ್ ” ಮನರಂಜನೆ-ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ವಿವಿಧ ಬಣ್ಣದ ಹುಲಿವೇಷಧಾರಿಗಳು ನೋಡುಗರಿಗೆ ಮನರಂಜನೆ ನೀಡಲಿದ್ದಾರೆ.
ಬ್ಯುರೋ ರಿಪೋರ್ಟ್ : ವಿಶ್ವನ್ಯೂಸ್24
