ಕಾಪು ಜಗದೀಶ್ ಬಂಗೇರ ಅವರಿಗೆ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿ.
ಕಾಪು: ಪುತ್ತೂರಿನಲ್ಲಿ ನಡೆದಂತಹ ಜೇಸಿ ವಲಯ 15 ರ ವ್ಯವಹಾರ ಸಮ್ಮೇಳನದಲ್ಲಿ “ಎ” ಪ್ರಾಂತ್ಯದ ವಿಭಾಗದಲ್ಲಿ ಕಾಪು ಓಂ ಗುರು ಕೇಟರಸ್ ನ ಮಾಲಕರಾದ ಜೆಸಿ ಜಗದೀಶ್ ಬಂಗೇರ ಅವರಿಗೆ ಉದ್ಯಮ ಕ್ಷೇತ್ರದಲ್ಲಿನ ಸಾಧನೆ ಮತ್ತು ಬೆಳವಣಿಗೆಯನ್ನ ಗುರುತಿಸಿ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ವಲಯ 15 ರ ವಲಯಾಧ್ಯಕ್ಷ ಜೆಸಿಐ ಪಿಪಿಪಿ ರಾಕೇಶ್ ಕುಂಜೂರು, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವುಡ, ವಲಯ ಉಪಾಧ್ಯಕ್ಷ ಜೆಎಫ್ಎಫ್ ಪಶುಪತಿ ಶರ್ಮ,ವ್ಯವಹಾರ ವಿಭಾಗದ ವಲಯ ನಿರ್ದೇಶಕ ಜೆಎಫ್ಪಿ ಪ್ರಶಾಂತ್ ಕುಮಾರ್ ರೈ ,ಐಪಿಝಡ್ಪಿ ಸಂತೋಷ್ ಜಿ. ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಜಗದೀಶ್ ಬಂಗೇರ ಸಾಮಾಜಿಕ ಮತ್ತು ಧಾರ್ಮೀಕ ಚಡುವಟಿಕೆಗಳಲ್ಲಿ ಮಂಚೂಣಿಯಲ್ಲಿದ್ದು. ಪ್ರತಿಷ್ಠಿತ ಕಾಪು ಜೆಸಿಐನ ಪೂರ್ವಧ್ಯಕ್ಷರಾಗಿ, ಯುವ ವಾಹಿನಿ,ಗಣೇಶೋತ್ಸವ ಸಮಿತಿ,ಹೊಸ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ,ಕಾರ್ಯ ನಿರ್ವಹಿಸಿದ್ದರು.

